Home ಕರ್ನಾಟಕ ಕರಾವಳಿ ರಾಹುಲ್ ಗಾಂಧಿ ಮಾತು ತನ್ನ ಅಪ್ರಬುದ್ಧತೆಯನ್ನ ತೋರಿಸುತ್ತದೆ: ಶ್ರೀನಿಧಿ ಹೆಗ್ಡೆ

ರಾಹುಲ್ ಗಾಂಧಿ ಮಾತು ತನ್ನ ಅಪ್ರಬುದ್ಧತೆಯನ್ನ ತೋರಿಸುತ್ತದೆ: ಶ್ರೀನಿಧಿ ಹೆಗ್ಡೆ

0
ರಾಹುಲ್ ಗಾಂಧಿ ಮಾತು ತನ್ನ ಅಪ್ರಬುದ್ಧತೆಯನ್ನ ತೋರಿಸುತ್ತದೆ: ಶ್ರೀನಿಧಿ ಹೆಗ್ಡೆ

ಉಡುಪಿ: ಭಾರತ ಖಂಡದ ಮೂಲ ಅಸ್ಮಿತೆಯೇ ಸನಾತನ ಸಂಸ್ಕೃತಿ, ಹಿಂದೂ ಆಚರಣೆ ಆಗಿದೆ. ಹಿಂದೂ ಭಾರತದ ಮೂಲ ತತ್ವ, ಹಿಂದೂ ಎಂದರೆ ಸಹಿಷ್ಣುತೆ, ಉದಾರತೆ ಆಗಿದೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್, ನ್ಯಾಯವಾದಿ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.

ಅನ್ಯ ಧರ್ಮದ ತುಷ್ಟೀಕರಣ ಮಾಡಲು ತಮ್ಮ ಒಟ್ ಬ್ಯಾಂಕ್ ಅನ್ನು ತೃಪ್ತಿ ಪಡಿಸಲು ಹಿಂದೂಗಳನ್ನು ಅವಹೇಳನ ಮಾಡಿ ತಾನೊಬ್ಬ ವಿರೋಧ ಪಕ್ಷದ ನಾಯಕ ಎಂಬ ಜವಾಬ್ದಾರಿಯನ್ನು ಮರೆತು ಲೋಕಸಭೆಯಲ್ಲಿ ತನ್ನ ಮೊದಲ ಭಾಷಣದಲ್ಲೇ ಹಿಂದೂಗಳು ಎಂದರೆ “ಹಿಂಸಾಚಾರ, ಅಸತ್ಯ ಮತ್ತು ದ್ವೇಷದಲ್ಲಿ” ಮುಳುಗಿರುವವರು ಎಂದು ಹೇಳಿದ್ದಾರೆ. ಈ ರೀತಿ ರಾಹುಲ್ ಗಾಂಧಿ ಮಾತನಾಡುವುದು ಮೊದಲ ಬಾರಿ ಅಲ್ಲ ಈ ಹಿಂದೆ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಾರಂಭದಲ್ಲಿ ಮಾತನಾಡಿ, ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದವಿದೆ. ನಾವು ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇವೆ ಎಂದಿದ್ದರು.

ಅಷ್ಟೇ ಅಲ್ಲದೆ ತನ್ನ ಇಂಡಿಯಾ ಮೈತ್ರಿ ಕೂಟದ ನಾಯಕರು ಹಿಂದೂಗಳ ವಿರುದ್ಧ ಆಡಿರುವ ಮಾತುಗಳು ಹಲವಾರು, ಡಿಎಂಕೆಯ ಸ್ಟಾಲಿನ್, ಎಸ್ ಪಿ ಹಾಗೂ ಆರ್ ಜೆ ಡಿ ಯ ನಾಯಕರು ಹಾಗೂ ತಮ್ಮ ಮೈತ್ರಿಯ ಭಾಗವಾದ ಮುಸ್ಲಿಂ ಲೀಗ್ ತನ್ನ ಮೆರವಣಿಗೆಯಲ್ಲಿ ಬಹಿರಂಗವಾಗಿ ಹಿಂದೂಗಳ ಶಿರಚ್ಛೇದ ಮಾಡುತ್ತೇವೆ ಎಂದಾಗ ಕೂಡ ತುಟಿ ಬಿಚ್ಚದವರು ಕಾಂಗ್ರೆಸ್ಸ್ ನಿಂದ ಇನ್ನು ಏನು ನಿರೀಕ್ಷಿಸಬಹುದು.

ನಮ್ಮ ದೇವಾನುದೇವತೆಗಳ ಒಂದು ಕೈಯಲ್ಲಿ ಶಾಸ್ತ್ರವಿದ್ದರೆ, ಇನ್ನೊಂದು ಕೈಯಲ್ಲಿ ಶಸ್ತ್ರವು ಇರುತ್ತದೆ. ಧರ್ಮವನ್ನು ಅನುಸರಿಸದಿದ್ದರೆ ಅಂದರೆ ನ್ಯಾಯ ನೀತಿ ಮೀರಿ ನಡೆದರೆ ಶಸ್ತ್ರಾಸ್ತ್ರಗಳನ್ನು ಹಿಡಿದು ಶಿಕ್ಷೆಯನ್ನು ನೀಡುವ ಉದ್ದೇಶ ನಮ್ಮ ದೇವರು ಮತ್ತು ದೇವತೆಗಳಿಗೆ ಅನಾದಿ ಕಾಲದಿಂದಲೂ ಇದೆ. ಇದೆಲ್ಲ ವಿದೇಶಿ ನೆಲದ ಸಂಸ್ಕೃತಿಯ ನೆರಳಲ್ಲಿ ಬೆಳೆದವರಿಗೆ ತಿಳಿಯದು.

ಕೋಟ್ಯಂತರ ಹಿಂದೂಗಳ ಭಾವನೆಗೆ ನೋವುಂಟು ಮಾಡಿದ ರಾಹುಲ್ ಗಾಂಧಿ ಅವರು ಕೂಡಲೇ ರಾಷ್ಟ್ರದ ಜನರಲ್ಲಿ ಕ್ಷಮೆ ಕೇಳಲಿ ಎಂದು ಈ ಮೂಲಕ ಆಗ್ರಹಿಸಿದ್ದಾರೆ.

 

LEAVE A REPLY

Please enter your comment!
Please enter your name here