
ಉಡುಪಿ: ಮಳೆಗಾಲದಲ್ಲಿ ಪ್ರವಾಸಕ್ಕೆಂದು ಸಮುದ್ರ, ಜೋಗ ಜಲಪಾತ, ನದಿಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ವೇಳೆ ನಾನಾ ಕಡೆಗಳಲ್ಲಿ ಅಪಾರ ಆಸ್ತಿ ಹಾನಿ, ಜೀವಹಾನಿಯಂತಹ ಪ್ರಕರಣಗಳು ನಡೆದಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸದಂತೆ ಪ್ರವಾಸೋದ್ಯಮ ಇಲಾಖೆ ಈ ಹಿಂದೆ ಸೂಚಿಸಿತ್ತು.
ಆದರೂ ಕೂಡ ಕೆಲವೆಡೆ ಖಾಸಗಿ ಸಹಭಾಗಿತ್ವದವರು ತಮ್ಮ ಜಲಸಾಹಸ ಚಟುವಟಿಕೆಯನ್ನು ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಮಳೆಗಾಲ ಮುಗಿಯುವವರೆಗೆ ಕಡ್ಡಾಯವಾಗಿ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಜಲಸಾಹಸ ಚಟುವಟಿಕೆಗಳಾದ ಬೋಟಿಂಗ್, ಕಯಾಕಿಂಗ್, ಸರ್ಫಿಂಗ್ ಹಾಗೂ ಐಲ್ಯಾಂಡ್ ಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
