ಉಡುಪಿ:ಕರಾವಳಿ ಜಿಲ್ಲೆಯ ಹಲವೆಡೆ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಉಡುಪಿ, ಮಣಿಪಾಲ , ಪಕಳ ಸೇರಿದಂತೆ ಹಲವೆಡೆ ನಿನ್ನೆ ಸಂಜೆ, ರಾತ್ರಿ ಸಾಧಾರಣವಾಗಿ ಮಳೆ ಸುರಿದರೆ, ಪುತ್ತೂರು, ವಿಟ್ಲ ಸೇರಿದಂತೆ ಹಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಇನ್ನು, ಕೊಕ್ಕಡ, ನಿಂತಿಕಲ್ಲು, ಬಳ್ಪ, ಕಡಬ, ಉಪ್ಪಿನಂಗಡಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಅಲ್ಲದೇ ಮುಂದಿನ ನಾಲ್ಕು ದಿನಗಳ ಕಾಲ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಕೂಡ ನಿರಂತರ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
