Home ಕರ್ನಾಟಕ ಕರಾವಳಿ ಅಡುಗೆ ಕೆಲಸಕ್ಕೆಂದು ಹೊರಟಿದ್ದ ಯುವಕ ಬೈಕ್‌ ಅಪಘಾತದಲ್ಲಿ ಸಾವು

ಅಡುಗೆ ಕೆಲಸಕ್ಕೆಂದು ಹೊರಟಿದ್ದ ಯುವಕ ಬೈಕ್‌ ಅಪಘಾತದಲ್ಲಿ ಸಾವು

0
ಅಡುಗೆ ಕೆಲಸಕ್ಕೆಂದು ಹೊರಟಿದ್ದ ಯುವಕ ಬೈಕ್‌ ಅಪಘಾತದಲ್ಲಿ ಸಾವು

ಮಣಿಪಾಲ: ಅಡುಗೆ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ ಯುವಕನೋರ್ವ ಬೈಕ್‌ ಅಫಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಪಕಳ ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಭಾಜಕದ ಬಳಿ ನಡೆದಿದೆ.

ಮೃತರನ್ನು ಹಿರಿಯಡ್ಕ ನಿವಾಸಿ ಅಕ್ಷಯ್‌ ಭಟ್‌(26) ಎಂದು ಗುರುತಿಸಲಾಗಿದೆ. ಅಡುಗೆ ವೃತ್ತಿ ಮಾಡಿಕೊಂಡಿದ್ದ ಈತ ಇಂದ್ರಾಳಿಯ ದೇವಸ್ಥಾನವೊಂದರಲ್ಲಿ ನವರಾತ್ರಿಯ ಸರ್ವಜನಿಕ ಅನ್ನಸಂತರ್ಪಣೆ ಅಡುಗೆ ಕೆಲಸ ಮಾಡಲು ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕಾಗಮಿಸಿದ ಮಣಿಪಾಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here