
ನೇಪಾಳ: ಪ್ರಭಾಸ್ ಅವರ ನಟನೆಯ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ ಇಂದು ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದು, ಮೊದಲನೇ ದಿನವೇ ದಾಖಲೆಯ ಮಟ್ಟದ ಕಲೆಕ್ಷನ್ ನ ನಿರೀಕ್ಷೆಯಿದೆ. ಪ್ಯಾನ್ ಇಂಡಿಯಾ ಸಿನಿಮಾವಾದ ಆದಿಪುರುಷ್ ಗೆ ಇದೀಗ ಸಂಕಷ್ಟವೊಂದು ಎದುರಾಗಿದ್ದು, ಚಿತ್ರದಲ್ಲಿರುವ ಸಂಭಾಷಣೆಯೊಂದಕ್ಕೆ ಸಂಬಂಧಿಸಿದಂತೆ ನೇಪಾಳದ ಕಠ್ಮಂಡುವಿನಲ್ಲಿ ಸಿನಿ ಪ್ರದರ್ಶನಕ್ಕೆ ತಡೆ ಹಿಡಿಯಲಾಗಿದೆ.
ಹೌದು, ಬಹುನಿರೀಕ್ಷಿತ ಆದಿಪುರುಷ್ ಸಿನಿಮಾದಲ್ಲಿ ಸೀತೆಯನ್ನು ಭಾರತದ ಮಗಳು ಎಂದು ಹೇಳಲಾಗಿದೆ. ಆದರೆ ಇತಿಹಾಸದಲ್ಲಿ ಸೀತೆಯನ್ನು ನೇಪಾಳದ ಮಗಳು ಎಂದು ಪರಿಗಣಿಸಲಾಗಿದೆ. ಸಿನಿಮಾದಲ್ಲಿ ಈ ಸಂಭಾಷಣೆಯ ಸಾಲನ್ನು ಬದಲಾಯಿಸಿದರೆ ಮಾತ್ರ ವೇಳಾಪಟ್ಟಿಯ ಪ್ರಕಾರ ಸಿನಿಮಾ ಬಿಡುಡೆ ಮಾಡಲು ಬಿಡುತ್ತೇವೆ. ಇದಕ್ಕಾಗಿ ಮೂರು ದಿನಗಳ ಕಾಲವಾಕಾಶ ಕೊಡುತ್ತೇವೆ.
ಇಲ್ಲವಾದಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.
ಇನ್ನು, ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಅದ್ಭುತ ಪ್ರದಶನವನ್ನು ಕಾಣುತ್ತಿದೆ. ಈ ಮೂವಿಯಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ಕೃತಿ ಸನೋನ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಂದು ಪೌರಾಣಿಕ ಮೂವಿಯಾಗಿದ್ದು 500 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರವನ್ನು ಓಂ ರಾವತ್ ಅವರು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರವು 3ಡಿಯ ಮೂಲಕ ತೆರೆಗೆ ಅಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಿದೆ.
