Home ಕರ್ನಾಟಕ ಆದಿಪುರುಷ್‌ ಸಿನಿಮಾಗೆ ಮತ್ತೆ ವಿಘ್ನ: ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ದೆಹಲಿ ಹೈಕೋಟ್‌ಗೆ ಅರ್ಜಿ

ಆದಿಪುರುಷ್‌ ಸಿನಿಮಾಗೆ ಮತ್ತೆ ವಿಘ್ನ: ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ದೆಹಲಿ ಹೈಕೋಟ್‌ಗೆ ಅರ್ಜಿ

0
ಆದಿಪುರುಷ್‌ ಸಿನಿಮಾಗೆ ಮತ್ತೆ ವಿಘ್ನ: ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ದೆಹಲಿ ಹೈಕೋಟ್‌ಗೆ ಅರ್ಜಿ

ಹೈದರಾಬಾದ್:‌ ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್‌ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. 500 ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಈ ಸಿನಿಮಾ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವ ನಿರೀಕ್ಷೆಯಿತ್ತು. ಆದರೆ ಸಿನಿಮಾದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಸಿನಿಮಾಗ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದ್ದು, ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.


ಹೌದು, ಇತ್ತೀಚೆಗೆ ನೇಪಾಳದಲ್ಲಿ ಚಿತ್ರ ಪ್ರದರ್ಶನ ಮಾಡುವುದಕ್ಕೆ ಅಡ್ಡಿ ಹಾಕಲಾಗಿತ್ತು. ಚಿತ್ರದ ಸಂಭಾಷಣೆಯಲ್ಲಿ ಕೆಲವೊಂದು ಬದಲಾವಣೆ ಮಾಡಿದರೆ ಮಾತ್ರ ಸಿನಿಮಾ ಬಿಡುಗಡೆಗೆ ಅವಕಾಶ ಮಾಡುವುದಾಗಿ ಹೇಳಿತ್ತು. ಈ ನಡುವೆ ಇದೀಗ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ದೆಹಲಿ ಹೈ ಕೋಟ್‌ ಗೆ ಹಿಂದೂಪರ ಸಂಘಟನೆಗಳು ಸಾರ್ವಜನಿಕ ಹಿತಾಸಕ್ತಿ ಅಜಿ ಸಲ್ಲಿಸಿವೆ.
ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ದಕ್ಕೆಯಾಗುವಂತಹ ಸಾಕಷ್ಟು ವಿಷಯಗಳಿವೆ. ಹೀಗಾಗಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೇ ಸಿನಿಮಾದಲ್ಲಿ ರಾಮಾಯಣವನ್ನು ತಮಗೆ ಬೇಕಾದ ಹಾಗೆ ಬದಲಾಯಿಸಿಕೊಂಡಿದ್ದಾರೆ ಎನ್ನುವುದನ್ನು ಕೂಡ ಉಲ್ಲೇಖಿಸಲಾಗಿದೆ.
ಇನ್ನು, ಈ ಮೂವಿಯಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ, ಕೃತಿ ಸನೋನ್‌ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಂದು ಪೌರಾಣಿಕ ಮೂವಿಯಾಗಿದ್ದು 500 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರವನ್ನು ಓಂ ರಾವತ್ ಅವರು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರವು 3ಡಿಯ ಮೂಲಕ ತೆರೆಗೆ ಅಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಿದೆ.

 

LEAVE A REPLY

Please enter your comment!
Please enter your name here