
ಅಲಹಾಬಾದ್: ಆದಿಪುರುಷ್ ಸಿನಿಮಾ ತೆರೆಗೆ ಬಂದಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಕುರಿತಾಗಿ ಅನೇಕ ರೀತಿಯ ಟ್ರೋಲ್ ಗಳೂ ಕೂಡ ಆಗುತ್ತಿವೆ. ಈ ನಡುವೆ ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಗಳು ಕೇಳಿ ಬರುತ್ತಿದೆ. ಹಲವಾರು ಅರ್ಜಿಗಳು ಕೋಟ್ ಮೆಟ್ಟಿಲೇರಿದ್ದು, ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಸಿನಿಮಾ ತಂಡಕ್ಕೆ ಚಾಟಿ ಬೀಸಿದೆ.
ಈ ಬಗ್ಗೆ ಚಿತ್ರದ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಈ ಸಿನಿಮಾದ ಡೈಲಾಗ್‌ಗಳು ಪ್ರೇಕ್ಷಕರನ್ನು ಕೆರಳಿಸಿದೆ. ಸಿನಿಮಾಗಳು ಕೆಲವೊಂದು ಸೂಕ್ಷ್ಮ ವಿಚಾರವನ್ನು ಮುಟ್ಟಲು ಹೋಗಬಾರದು. ಚಿತ್ರದಲ್ಲಿ ಕೆಲವು ಸಂಭಾಷಣೆಗಳು ಅನೇಕ ಸಮಸ್ಯೆಯನ್ನುಂಟು ಮಾಡಿದ್ದು, ಕೆಲವು ದೃಶ್ಯಗಳನ್ನು ಚಿಕ್ಕಮಕ್ಕಳು ನೋಡಲು ಅಸಾಧ್ಯ ಎಂದು ಹೇಳಿದೆ. ಇದರೊಂದಿಗೆ ಸಿನಿಮಾದ ಸಹಲೇಖಕ ಮನೋಜ್ ಮುಂತಶೀರ್ ಶುಕ್ಲಾ ಅವರಿಗೆ ನೋಟಿಸ್ ಜಾರಿ ಮಾಡಿರುವ ಸರ್ಕಾರ ಒಂದು ವಾರದೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದೆ.
ಇನ್ನು, ಇತ್ತೀಚೆಗೆ ಸಿನಿಮಾ ಬ್ಯಾನ್‌ಮಾಡುವಂತೆ ಆಲ್‌ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್‌ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿತ್ತು. ಈ ಬಗ್ಗೆ ಪತ್ರ ಬರೆದಿರುವ ಅವರು, ಸಿನಿಮಾದಲ್ಲಿ ವಿವಾದ ಹುಟ್ಟು ಹಾಕುವಂಥ ಸಾಕಷ್ಟು ಸನ್ನಿವೇಶಗಳಿವೆ. ಕಥೆಯನ್ನು ಮನಸ್ಸಿಗೆ ಬಂದಂತೆ ಕಟ್ಟಿಕೊಡಲಾಗಿದೆ. ಈ ಚಿತ್ರದ ಸಂಭಾಷಣೆ ಎಲ್ಲರಿಗೂ ನೋವನ್ನುಂಟು ಮಾಡಿದೆ. ಈ ಹಿನ್ನೆಲೆ ಸಿನಿಮಾವನ್ನು ಥಿಯೇಟರ್‌ಹಾಗೂ ಒಟಿಟಿ ಎರಡಲ್ಲೂ ಪ್ರಸಾರ ಮಾಡದಂತೆ ಬ್ಯಾನ್‌ಮಾಡಬೇಕು ಎಂದಿದ್ದಾರೆ.
