
ಬೆಂಗಳೂರು: ಕೋವಿಡ್ ಬಳಿಕ ಗಗನಕ್ಕೇರಿದ್ದ ಚಿನ್ನದ ಬೆಲೆ ಸಾಮಾನ್ಯವರ್ಗದ ಜನರಿಗೆ ತಲೆನೋವುಂಟು ಮಾಡಿತ್ತು. ಇದೀಗ ಕಳೆದೊಂದು ವಾರದಿಂದ ಚಿನ್ನದ ಬೆಲೆಯಲ್ಲಿ ಇಳಿಮುಖ ಕಂಡಿದ್ದು ಚಿನ್ನ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು 150 ರೂ ಕುಸಿತ ಕಂಡಿದೆ.
ಕಳೆದ ಆರು ತಿಂಗಳಲಲ್ಲೇ ಚಿನ್ನದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬೆಂಗಳೂರು, ಮಂಗಳೂರು. ಮೈಸೂರು, ಬಳ್ಳಾರಿ ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನದ ದರ ವ್ಯತ್ಯಾಸಾತ್ಮಕ ದರ ಕಂಡುಬಂದಿದೆ. ಬೆಂಗಳೂರಿನ್ಲಲಿ 22 ಕ್ಯಾರೆಟ್ ಚಿನ್ನದ ಬೆಲೆ 53,200 ರೂ ಆಗಿದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 58040 ರೂ ಆಗಿದೆ. ಇನ್ನು, ಮುಂಬೈನಲ್ಲಿ 22ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 53,200ರೂ, ಚೆನ್ನೈನಲ್ಲಿ 53,356, ದೆಹಲಿಯಲ್ಲಿ 53,350, ಕೇರಳದಲ್ಲಿ 53,200ರೂ, ಲಕ್ನೋದಲ್ಲಿ 53350 ರೂ ಇದೆ. ಒಟ್ಟಾರೆಯಾಗಿ ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯವಾಗಿದೆ.
