
ಇಂದು ಸರ್ಕಾರವು ಕಾರ್ಮಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಟ್ಟಡ ಕಾರ್ಮಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ರೀತಿಯ ಸುಧಾರಣೆಗಳನ್ನು ಆಗಾಗ ಜಾರಿಗೆ ತರುತ್ತಲೇ ಇದ್ದು, ಕಾರ್ಮಿಕರ ಅಭಿವೃದ್ಧಿ ಕೂಡ ಸರ್ಕಾರಕ್ಕೆ ಮುಖ್ಯವಾಗುತ್ತದೆ. ಕಾರ್ಮಿಕರಿಗಾಗಿ ಆರೋಗ್ಯ, ಸಹಾಯಧನ ಇನ್ನಿತರ ಸೌಲಭ್ಯ ನೀಡುವ ಜೊತೆಗೆ ಉತ್ತಮ ಜೀವನ ನಡೆಸುವ ಸಲುವಾಗಿ ಇನ್ನೊಂದು ಯೋಜನೆಗೆ ಮಾನ್ಯತೆ ನೀಡಿದೆ.
ಯಾವುದು ಯೋಜನೆ
ಕಾರ್ಮಿಕರ ಮಕ್ಕಳ ಮದುವೆಗೆ ಸಹಾಯಧನ ನೀಡುವ ಒಂದು ಹೊಸ ಯೋಜನೆ ಇದಾಗಿದ್ದು, ಕಾರ್ಮಿಕರ ಮಕ್ಕಳಿಗೆ ಮದುವೆ ಖರ್ಚು ವೆಚ್ಚ ನೀಡಲು ಮುಂದಾಗಿದೆ. ಕಾರ್ಮಿಕರ ಮಕ್ಕಳ ಮದುವೆಗೆ ಉಪಯೋಗವಾಗಲೆಂದು ಕಾರ್ಮಿಕ ಮಂಡಳಿಯ ಸಹಕಾರದ ಮೂಲಕ ಈ ಹಣ ಬಿಡುಗಡೆಗೊಳ್ಳಲಿದೆ.
ಕಾರ್ಮಿಕರ ಮಕ್ಕಳಿಗೆ ಮಾತ್ರ
ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗಲಿದ್ದು, ಒಬ್ಬ ಕಾರ್ಮಿಕನ ಇಬ್ಬರು ಮಕ್ಕಳಿಗೆ ತಲಾ 60ಸಾವಿರ ರೂ. ನಂತೆ ಮದುವೆ ಮಾಡಿಸಲು ಈ ಹಣ ನೆರವಾಗಲಿದೆ. ಈ ಯೋಜನೆಯಿಂದ ಬಡವರ್ಗದ ಜನರಿಗೆ ಸಹಾಯಕವಾಗಲಿದೆ ಎನ್ನಬಹುದು. ಒಂದು ವೇಳೆ ಓರ್ವ ಕಾರ್ಮಿಕನಿಗೆ ಇಬ್ಬರು ಮಕ್ಕಳಿದ್ದರೂ ಆ ಇಬ್ಬರೂ ಮಕ್ಕಳಿಗೂ ಮದುವೆ ಹಣ ನೀಡಲು ಕಾರ್ಮಿಕ ಮಂಡಳಿ ತೀರ್ಮಾನಿಸಲಾಗಿದೆ.
ಅರ್ಹತೆ ಏನು?
ಈ ಸಹಾಯ ಧನ ಸಿಗಲು ನಿರ್ದಿಷ್ಟ ರೂಪ ರೇಷೆ ಇದ್ದು, ಕಾರ್ಮಿಕರ ಇಲಾಖೆಯಲ್ಲಿ ನೋಂದಣಿಯಾದ ಸದಸ್ಯರಿಗೆ ಸಿಗಲಿದೆ. ಇಲಾಖೆಯ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷವಾದರೂ ಸದಸ್ಯತ್ವ ಹೊಂದಿದ್ದರೆ ಈ ಸೌಲಭ್ಯ ಸಿಗಲಿದೆ. ಒಂದು ಕುಟುಂಬದ ಇಬ್ಬರಿಗೆ ಮಾತ್ರವೇ ಸಹಾಯಧನ ಸಿಗಲಿದೆ.
ಅರ್ಜಿ ಸಲ್ಲಿಸಿ
ಕಟ್ಟಡ ಕಾರ್ಮಿಕ ಇಲಾಖೆಯ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲದೇ ಕಟ್ಟಡ ಕಾರ್ಮಿಕರ ಮಂಡಳಿಗೂ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಬಹುದು.
