
ಕೇರಳ: ಗೂಗಲ್ ಮ್ಯಾಪ್ ನೀಡಿದ್ದ ಮಾಹಿತಿಯಂತೆ ಕಾರನ್ನು ಚಲಾಯಿಸಿದ್ದ ಪರಿಣಾಮ ಕಾರು ನದಿಗೆ ಉರುಳಿ ಇಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಮೃತರನ್ನು ವೈದ್ಯರಾದ ಅದ್ವೈತ್ (29), ಅಜ್ಮಲ್(29) ಎಂದು ಗುರುತಿಸಲಾಗಿದೆ. ಇವರು ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತಿದ್ದರು ಎನ್ನಲಾಗಿದೆ. ಐವರು ವೈದ್ಯರು ಕಾರಿನಲ್ಲಿ ಕೊಡಂಗಲ್ಲೂರಿಗೆ ವಾಪಸ್ ಆಗುತ್ತಿದ್ದ ವೇಳೆ ರಾತ್ರಿ ವಿಪರೀತ ಮಳೆ ಸುರಿಯುತ್ತಿದ್ದ ಹಿನ್ನೆಲೆ ವೈದ್ಯರು ದಾರಿ ತಿಳಿದುಕೊಳ್ಳಲು ಗೂಗಲ್ ಮ್ಯಾಪ್ ಬಳಸಿದ್ದಾರೆ. ಗೂಗಲ್ ನಕ್ಷೆ ತೋರಿಸಿದ ಮಾರ್ಗದಲ್ಲಿಯೇ ಕಾರು ಚಲಾಯಿಸಿದರಾದರೂ, ಗೂಗಲ್ ಮ್ಯಾಪ್ ಎಡಕ್ಕೆ ತಿರುಗಲು ತೋರಿಸಿದ್ದರೂ ಇವರು ಬಲಕ್ಕೆ ತಿರುಗಿ ಬಂದಿದ್ದರು. ಪರಿಯಾರ್ ನದಿ ಸಮೀಪ ಬಂದಾಗ ಅದು ನೀರು ತುಂಬಿರುವ ರಸ್ತೆ ಎಂದು ತಿಳಿದು ಕಾರನ್ನು ಮುಂದಕ್ಕೆ ಚಲಾಯಿಸಿದ್ದಾರೆ. ಕಾರು ಮುಳುಗಲಾರಂಭಿಸಿದಾಗ ಹಿಂಬದಿ ಇದ್ದ ಮೂವರು ಕಾರಿನಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ. ಆದರೆ ಮುಂದಿನ ಸೀಟಿನಲ್ಲಿದ್ದ ಇನ್ನಿಬ್ಬರು ನೀರುಪಾಲಾಗಿದ್ದಾರೆ.
