
ಚುನಾವಣೆ ಪೂರ್ವದಲ್ಲಿ ಹೇಳಿರುವಂತೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಭಾರೀ ಹೆಚ್ಚು ಮಹಿಳಾ ಪರ ಯೋಜನೆ ಜಾರಿಗೆ ತಂದಿದ್ದು, ಮಹಿಳೆಯರಿಗೆ ಆರ್ಥಿಕ ಉತ್ತೇಜನ ಸಹ ನೀಡುತ್ತಿದೆ. ಅದೇ ರೀತಿ ಈ ಯೋಜನೆಯ ಸದುಪಯೋಗ ಕೂಡ ಮಹಿಳೆಯರು ಪಡೆದುಕೊಂಡಿದ್ದಾರೆ. ಅಂತಹ ಯೋಜನೆಯಲ್ಲಿ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಬಹಳ ಸುದ್ದಿಯಲ್ಲಿದ್ದು , ಗೃಹಲಕ್ಷ್ಮಿ ಯೋಜನೆಯ ಮೊದಲ ಮತ್ತು ಎರಡನೇ ಕಂತಿನ ಹಣ ಕೆಲವು ಮಹಿಳೆಯರಿಗಷ್ಟೆ ಜಮೆ ಯಾಗಿದೆ. ಅನೇಕರಿಗೆ ಹಣ ಬರುವುದು ಬಾಕಿ ಇದೆ. ಈ ಬಗ್ಗೆ ಸರಕಾರ ಮಹತ್ವದ ಮಾಹಿತಿ ನೀಡಿದೆ.
ಎರಡು ಕಂತಿನ ಹಣ ಬಿಡುಗಡೆ
ಕೆಲವು ಮಹಿಳೆಯರಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಜಮೆಯಾಗಿದೆ. ಈ ನಡುವೆ ಮೊದಲ ಕಂತು ಹಣ ಕೆಲವು ಮಹಿಳೆಯರಿಗೆ ಬಂದಿಲ್ಲ. ಈ ಬಗ್ಗೆ ಹಲವು ಮಹಿಳೆಯರು ಕಾಯುತ್ತಿದ್ದು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸೂಚನೆ ನೀಡಿದ್ದಾರೆ ಅಕ್ಟೊಬರ್ ತಿಂಗಳ ಹಣ ಈ ವಾರದಲ್ಲೆ ಜಮೆಯಾಗಲಿದೆ.ಎಲ್ಲರ ಖಾತೆಗೂ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಕೆಲವೊಂದು ತಾಂತ್ರಿಕ ಸಮಸ್ಯೆ ಯಿಂದ ಕೆಲವರ ಖಾತೆಗೆ ಹಣ ಬಂದಿಲ್ಲ ಎಂದು ತಿಳಿಸಿದ್ದಾರೆ.
ಸೂಚನೆ ನೀಡಲಾಗಿದೆ
ಗೃಹಲಕ್ಷ್ಮಿ ಯೋಜನೆಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಶೀಘ್ರ ಹಣ ಮಂಜೂರು ಮಾಡಲು ಈಗಾಗಲೇ ಸೂಚಿಸಲಾಗಿದ್ದು, ಅದನ್ನು ಪರಿಹಾರ ಮಾಡಿ ಹಣ ಜಮೆ ಮಾಡಲಾಗುತ್ತದೆ. ಈ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಪಡಿತರ ಕಾರ್ಡ್ ಸಮಸ್ಯೆ , ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಲಿಂಕ್ ಸಮಸ್ಯೆ ಬಗ್ಗೆ ಮನೆ ಮನೆಗೆ ತೆರಳಿ ಮಾಹಿತಿ ನೀಡಲು ತಿಳಿಸಲಾಗಿದ್ದು ಶೀಘ್ರ ಗೃಹಲಕ್ಷ್ಮಿ ಸಮಸ್ಯೆ ಬಗೆಹರಿಸಲು ಪರಿಹಾರ ತೆಗೆದು ಕೊಳ್ಳಲಾಗಿದೆ.
ದಾಖಲೆ ಸರಿಪಡಿಸಿ
ಈ ಬಗ್ಗೆ ಮಹಿಳೆಯರು ದಾಖಲೆಯನ್ನು ಸರಿಪಡಿಸುವುದು ಬಹಳ ಮುಖ್ಯ. ಹೌದು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನಲ್ಲಿ ಸರಿಯಾದ ಹೆಸರು, ವಿಳಾಸ ಇದ್ದರೆ ಮಾತ್ರ ಹಣ ಜಮೆ ಯಾಗುತ್ತದೆ. ಹಾಗಾಗಿ ಮಹಿಳೆಯರು ತಮ್ಮಮಾಹಿತಿ ಸರಿಪಡಿಸಿಕೊಳ್ಳುವುದು ಮುಖ್ಯ.
