Home ರಾಜ್ಯ ಜೂನ್‌ 15ಕ್ಕೆ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ

ಜೂನ್‌ 15ಕ್ಕೆ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಸಿಇಟಿ ಪರೀಕ್ಷಾ ಫಲಿತಾಂಶವನ್ನು ಜೂನ್‌ 15ರಂದು ಪ್ರಕಟಗೊಳಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ. ಇಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗಾಗಿ ಬರೆದಿದ್ದ ಸಿಇಟಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹುತೇಕ ಪೂರ್ಣಗೊಂಡಿದೆ ಫಲಿತಾಂಶವನ್ನು ಜೂನ್‌ 15ರಂದು ಪ್ರಕಟಿಸಲಾಗುತ್ತದೆ. ಪ್ರಸ್ತುತ ಸಿಇಟಿ ಫಲಿತಾಂಶ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಎರಡನ್ನೂ ಆಧರಿಸಿ ರ‍್ಯಾಂಕ್ ಪಟ್ಟಿ ಸಿದ್ಧಪಡಿಸುತ್ತಿರುವ ಹಿನ್ನೆಲೆ ಜೂನ್‌ 15ಕ್ಕೆ ಫಲಿತಾಂಶ ಪ್ರಕಟಿಸಲಾಗುವುದ ಎಂದು ಕರ್ನಾಟ ಪರೀಕ್ಷಾ ಪ್ರಾಧಿಕಾರ ಹೇಳಿದೆ.

 
Previous articleವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೌಢಶಾಲಾ ವಿದ್ಯಾರ್ಥಿನಿ
Next articleಶೀಘ್ರದಲ್ಲೇ ಮದುವೆಯಾಗಬೇಕಿದ್ದ ಜೋಡಿ ಸೇರಿದ್ದು ಮಾತ್ರ ಸ್ಮಶಾನ