Home ಕರ್ನಾಟಕ ನಾಲೆಗೆ ಬಿದ್ದ ಮಗಳ ರಕ್ಷಣೆಗೆ ಹೋದ ಅಪ್ಪ-ಅಮ್ಮನೂ ನೀರು ಪಾಲು: ಮೈಸೂರಲ್ಲೊಂದು ದಾರಣ ಘಟನೆ

ನಾಲೆಗೆ ಬಿದ್ದ ಮಗಳ ರಕ್ಷಣೆಗೆ ಹೋದ ಅಪ್ಪ-ಅಮ್ಮನೂ ನೀರು ಪಾಲು: ಮೈಸೂರಲ್ಲೊಂದು ದಾರಣ ಘಟನೆ

0
ನಾಲೆಗೆ ಬಿದ್ದ ಮಗಳ ರಕ್ಷಣೆಗೆ ಹೋದ ಅಪ್ಪ-ಅಮ್ಮನೂ ನೀರು ಪಾಲು: ಮೈಸೂರಲ್ಲೊಂದು ದಾರಣ ಘಟನೆ

ಮೈಸೂರು: ಅಜ್ಜಿಯ ತಿಥಿ ಕಾರ್ಯ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಕೂಡ ನೀರು ಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಾಹೀರಾ ಭಾನು(20), ಮಹಮ್ಮದ್‌ ಕಪೀಲ್(‌42), ಶಾವರ ಭಾನು(42) ಮೃತ ದುರ್ದೈವಿಗಳು. ಅಜ್ಜಿಯ ತಿಥಿ ಕಾರ್ಯ ಮುಗಿಸಿ ಕೈ ಕಾಲು ತೊಳೆಯಲು ಹೋದಾಗ ಕಾಲು ಜಾರಿ ಮಗಳು ಶಾಹೀರಾ ಭಾನು ನಾಲೆಗೆ ಬಿದ್ದಿದ್ದಾಳೆ. ಮಗಳನ್ನು ರಕ್ಷಿಸಲು ಹೋದ ಅಪ್ಪ-ಅಮ್ಮನೂ ಕೂಡ ನೀರುಪಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಮೂವರ ಮೃತದೇಹವನ್ನು ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

 

LEAVE A REPLY

Please enter your comment!
Please enter your name here