Home ಸುದ್ದಿಗಳು ರಾಷ್ಟ್ರೀಯ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ ಆಗಿದೆಯೇ,ಕಾರಣ ಇದೆ ನೋಡಿ

ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ ಆಗಿದೆಯೇ,ಕಾರಣ ಇದೆ ನೋಡಿ

0
ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ ಆಗಿದೆಯೇ,ಕಾರಣ ಇದೆ ನೋಡಿ

ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನಮ್ಮ ಗುರುತು ಚೀಟಿಗಳಲ್ಲಿ ಒಂದು ಎಂಬ ಸ್ಥಾನವನ್ನು ಪಡೆದಿದ್ದು, ಅವುಗಳ ಲಿಂಕ್ ಅನ್ನು ಅನೇಕ ಕಡೆ ಕಡ್ಡಾಯ ಮಾಡಲಾಗಿತ್ತು. ಆಧಾರ್ ಮತ್ತು ಪಾನ್ ಕಾರ್ಡ್ ಗಡುವನ್ನು ಹಲವು ಬಾರಿ ವಿಸ್ತರಣೆ ಮಾಡುತ್ತಾ ಬಂದಿದ್ದು, ಪಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇದ್ದವರಿಗೆ ಅನೇಕ ಬಾರಿ ಅವಕಾಶ ನೀಡಲಾಗಿತ್ತು. ಅಷ್ಟು ಮಾತ್ರವಲ್ಲದೆ ಬ್ಯಾಂಕಿನ ಕೆಲ ಅಗತ್ಯ ಚಟುವಟಿಕೆಗೆ ಪಾನ್ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದ್ದ ಬೆನ್ನಲ್ಲೆ ಪಾನ್ ಕಾರ್ಡ್ ನಿಷ್ಕ್ರಿಯ ಮಾಡುವ ಹೊಸ ಸುದ್ದಿಯೊಂದು ತಿಳಿದುಬಂದಿದೆ.

ಯಾಕೆ ನಿಷ್ಕ್ರಿಯ?
ಈ ಹಿಂದಿನಿಂದಲೂ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಅನೇಕ ಅವಕಾಶ ನೀಡಲಾಗಿತ್ತು. ಹಾಗಿದ್ದರೂ ಇನ್ನೂ ಕೂಡ ಲಿಂಕ್ ಮಾಡದವರನ್ನು ಸರ್ಕಾರ ಗಮನದಲ್ಲಿರಿಸಿದೆ. ಹೀಗಾಗಿ 11.5ಕೋಟಿ ಪಾನ್ ಕಾರ್ಡನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಚಂದ್ರಶೇಖರ್ ಗೌರ್ ಸಹ ಪ್ರಶ್ನೆ ಮಾಡಲಾಗಿದ್ದು, ಸರ್ಕಾರ ಒಂದು ವರ್ಷವಾದರೂ ಪಾನ್ ಆಧಾರ್ ಲಿಂಕ್ ಗಡುವು ವಿಸ್ತರಿಸಬೇಕು ಎಂದು ಆರ್ ಟಿ ಓ ಮೂಲಕ ಮನವಿ ಮಾಡಿದ್ದು ಕೇಂದ್ರೀಯ ನೇರ ತೆರಿಗೆ ಮಂಡಳಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಜೂನ್ 30ರವರೆಗೆ ಸಮಯ ನಿಗದಿ ಮಾಡಲಾಗಿತ್ತು.

ದೇಶದಲ್ಲಿ 70.24ಕೋಟಿ ಜನ ಪಾನ್ ಕಾರ್ಡ್ ಅನ್ನು ಹೊಂದಿದ್ದು ಅದರಲ್ಲಿ 57.25ಕೋಟಿ ಆಧಾರ್‌ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಂಡಿದ್ದಾರೆ. 12ಕೋಟಿಗೂ ಅಧಿಕ ಪಾನ್ ಮತ್ತು ಆಧಾರ್ ಲಿಂಕ್ ಇಂದಿಗೂ ಆಗಿಲ್ಲ. ಆಧಾರ್ ಕಾರ್ಡ್ ಅನ್ನು ನಿಗಧಿತ ದಿನಾಂಕದ ಒಳಗೆ ಲಿಂಕ್ ಮಾಡಲು ವಿಫಲವಾದ ಕಾರಣ ಈ ಕ್ರಮ ಕೈಗೊಂಡಿದ್ದಾಗಿ ಮಾಹಿತಿ ಮೂಲಗಳು ತಿಳಿಸಿದೆ. ಹೀಗಾಗಿ ಇದುವರೆಗೆ 11.5ಕೋಟಿ ಪಾನ್ ಕಾರ್ಡ್ ನಿಷ್ಕ್ರಿಯ ಆಗಿದೆ ಎಂದಿ ಆರ್ ಟಿಐ ನ ಪ್ರತಿಕ್ರಿಯೆ ಮೂಲಕ ತಿಳಿಸಲಾಗಿದೆ‌.

2017ರ ಜುಲೈ 1ಕ್ಕಿಂತ ಮೊದಲು ಪಾನ್ ಕಾರ್ಡ್ ಮಾಡಿಸಿದ್ದರೆ ಅವರು ಕಡ್ಡಾಯವಾಗಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಲೇ ಬೇಕು. ಹೊಸ ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದವರಿಗೆ ಮಾತ್ರವೇ ಸಿಗಲಿದೆ. ಈಗ ಬರುವ ಕಾರ್ಡ್ ಗಳು ಆಧಾರ್ ನೊಂದಿಗೆ ಲಿಂಕ್ ಆಗಿಯೇ ಬರಲಿದೆ. ಆದಾಯ ತೆರಿಗೆ ಕಾಯ್ದೆ 139AA ಉಪ ವಿಭಾಗದ ಅಡಿಯಲ್ಲಿ ತಮ್ಮ ಆಧಾರ್ ಕಾರ್ಡ್ ತಿಳಿಸುವುದು ಕಡ್ಡಾಯ ಎಂದು ಉಲ್ಲೇಖಿಸಲಾಗಿದೆ.

ಪಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಅನ್ನು ಮಾಡದೇ ಇದ್ದವರು ಶುಲ್ಕವನ್ನು ಸಹ ಪಾವತಿಸಬೇಕಾಗಿದೆ. ಈ ಬಗ್ಗೆ ಸೆಕ್ಷನ್ 234H ಅನ್ವಯ ಇರುವ ತಿದ್ದುಪಡಿ ಸಹ ಇದೇ ವಿಚಾರ ಉಲ್ಲೇಖಿಸಿದೆ. ಹೊಸ ಪಾನ್ ಕಾರ್ಡ್ ಪಡೆಯಲು ಸಹ ವೆಚ್ಚ ಇದೆ ಈ ಬಗ್ಗೆ ಮುಂದಿನ ದಿನದಲ್ಲಿ ಯಾವ ರೀತಿ ತೀರ್ಮಾನ ಬರಬಹುದು ಎಂದು ಕಾದು ನೋಡಬೇಕು. ಈ ಬಗ್ಗೆ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.

 

LEAVE A REPLY

Please enter your comment!
Please enter your name here