
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಶ್ವ ಕರ್ಮ ಯೋಜನೆ ಜಾರಿಗೆ ತರಲು ಸಕಾರ ಮುಂದಾಗಿದ್ದು ಮೋದಿ ಅವರೇ ಈ ಯೋಜನೆಗೆ ಒಂದು ಅಧಿಕೃತ ಚಾಲನೆ ನೀಡಿದ್ದರು. ಈ ಯೋಜನೆಯ ಹೆಸರು ಪಿಎಂ ವಿಶ್ವಕರ್ಮ ಆಗಿದ್ದು, ಐದು ವರ್ಷದ ಅವಧಿಗೆ 13ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ.
ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೋದಿ ಅವರು ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಸಾಂಪ್ರದಾಯಿಕ ಕರಕುಶಲ ಕರ್ಮಿಗಳಿಗೆ ನೆರವಾಗುವ ಒಂದು ಮಹತ್ವದ ಉದ್ದೇಶ ಇದರಲ್ಲಿ ಇದೆ. ಕುಟುಂಬ ಆಧಾರಿತ ಸಾಂಪ್ರದಾಯಿಕ ಕರಕುಶಲ ಮತ್ತು ಕೌಶಲ್ಯ ಬಲಪಡಿಸುವ ಜೊತೆಗೆ ಗುರು ಶಿಷ್ಯ ಪರಂಪರೆ ಉಳಿಸುವ ಒಂದು ಉದ್ದೇಶ ಕೂಡ ಇದರಲ್ಲಿದೆ. ಇದರಲ್ಲಿ ಕೌಶಲ್ಯ ಕಾರ್ಯಕ್ರಮ ಸಹ ಇರಲಿದೆ. ಕೌಶಲ್ಯ ತರಬೇತಿ ಪಡೆಯುವವರಿಗೆ ದಿನಕ್ಕೆ 500ರೂ. ಸ್ಟೇ ಫಂಡ್ ನೀಡಲು ಸಹ ಚಿಂತಿಸಲಾಗಿದೆ.
ನೆರವಿನ ಉದ್ದೇಶ
ದೇಶಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಶಲ ಕರ್ಮಿಗಳ ಉತ್ಪನ್ನ ಮತ್ತು ಸೇವೆ ವಿಸ್ತರಣೆ ಮಾಡುವ ಗುರಿ ಇದರಲ್ಲಿದ್ದು, ಅಭಿವೃದ್ಧಿಯ ಜೊತೆ ಆರ್ಥಿಕ ನೆರವು ಸಹ ಸಿಗಲಿದೆ. ಈ ಒಂದು ಯೋಜನೆ ಸಾಂಪ್ರದಾಯಿಕ ಕುಶಲ ಕರ್ಮಿಗಳಿಗೆ ಮತ್ತು ಒಬಿಸಿ ಅವರಿಗೆ ಹೆಚ್ಚು ಅನುಕೂಲಕರವಾಗಲಿದೆ. ಈ ಯೋಜನೆಗೆ ಕಮ್ಮಾರರು, ನೇಕಾರರು, ಅಕ್ಕಸಾಲಿಗರು ಇತ್ಯಾದಿ ಗಳಿಗೆ ನೇರವಾಗಲಿದೆ.
ಯಾವೆಲ್ಲ ಕೆಲಸ ಈ ಯೋಜನೆ ಅಡಿಯಲ್ಲಿದೆ
ಟೈಲರ್, ಮೀನಿನ ಬಲೆ ತಯಾರಕರು, ಗೊಂಬೆ ತಯಾರಕರು, ಕಮ್ಮಾರ, ಅಕ್ಕಸಾಲಿಗ, ಕಲ್ಲು ಒಡೆಯುವವರು, ದೋಣಿ ತಯಾರಕರು, ಮೂರ್ತಿ ತಯಾರಕರು, ಸುತ್ತಿಗೆ ಕೆಲಸ, ಇತರ ಸಾಮಾಗ್ರಿ ತಯಾರಕರು, ಚಮ್ಮಾರರು, ಬುಟ್ಟಿ, ಚಾಪೆ, ಹಿಡಿಸುಡಿ ಮಾಡುವವರು, ಡೋಬಿ, ಕ್ಷೌರಿಕರು, ಮಾಲೆ ತಯಾರಕರು, ಬಡಗಿ ಇತ್ಯಾದಿ.
ಯಾವೆಲ್ಲ ಸೌಲಭ್ಯ ಸಿಗಲಿದೆ
ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಕುಶಲ ಕರ್ಮಿಗಳಿಗೆ ಹಾಗೂ ಕಲಾ ಕುಸುರಿದಾರಿಗಳಿಗೆ ಪ್ರಮಾಣಪತ್ರ ಹಾಗೂ ಗುರುತಿನ ಪ್ರತಿ ನೀಡಲಾಗುವುದು. 1ಲಕ್ಷ ರೂ. ವರೆಗೆ ಮೊದಲ ಹಂತದ ಸಾಲ ಸೌಲಭ್ಯ ಹಾಗೂ ಎರಡನೇ ಹಂತದಲ್ಲಿ 5% ಬಡ್ಡಿ ದರದ ಮೇಲೆ ಎರಡು ಲಕ್ಷ ಸಾಲ ಸೌಲಭ್ಯ ಸಿಗಲಿದೆ. 18 ಸಾಂಪ್ರದಾಯಿಕ ವ್ಯವಹಾರ ಈ ವ್ಯಾಪ್ತಿಯಲ್ಲಿ ಬರಲಿದೆ.
*ಬೇಕಾದ ಅಗತ್ಯ ವಸ್ತು ಖರೀದಿಗೆ ಸಬ್ಸಿಡಿ ಆಧಾರಿತ ಪ್ರೋತ್ಸಾಹ ಧನ.
*ವಸ್ತುಗಳ ಮಾರುಕಟ್ಟೆಗೆ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗುವುದು.
ಒಟ್ಟಿನಲ್ಲಿ ಈ ಯೋಜನೆಯ ಸೌಲಭ್ಯ ಹಲವು ಬಡಜನತೆಗೆ ನೇರವಾಗಲಿದೆ.
