Home ಕರ್ನಾಟಕ ಬೆಲೆ ಏರಿಕೆ ಶಾಕ್‌: ಪ್ರತಿ ಮೊಟ್ಟೆ ಮೇಲೆ 60ಪೈಸೆ ಹೆಚ್ಚಳ

ಬೆಲೆ ಏರಿಕೆ ಶಾಕ್‌: ಪ್ರತಿ ಮೊಟ್ಟೆ ಮೇಲೆ 60ಪೈಸೆ ಹೆಚ್ಚಳ

0
ಬೆಲೆ ಏರಿಕೆ ಶಾಕ್‌: ಪ್ರತಿ ಮೊಟ್ಟೆ ಮೇಲೆ 60ಪೈಸೆ ಹೆಚ್ಚಳ

ಬೆಂಗಳೂರು: ಬೆಲೆ ಏರಿಕೆಯ ಬಿಸಿ ಈಗಾಗಲೇ ಜನರನ್ನು ನಲುಗಿಸಿ ಬಿಟ್ಟಿದೆ. ಈ ನಡುವೆ ಇದೀಗ ಮೊಟ್ಟೆ ಬೆಲೆಯೂ ಕೂಡ ಏರಿಕೆಯಾಗಿದ್ದು, ಮೊಟ್ಟೆ ಪ್ರಿಯರಿಗೆ ಶಾಕ್‌ ಆಗಿದೆ.
ಈ ಬಾರಿ ಬಿಸಿಲಿನ ಬೇಗೆ ಹೆಚ್ಚಾದ ಕಾರಣ ಕೋಳಿಗಳಿಗೆ ರೋಗ ಬಾಧೆ ಹೆಚ್ಚಾದ ಕಾರಣ ಮೊಟ್ಟೆ ಉತ್ಪಾದನೆ ಮೇಲೆ ಪರಿಣಾಮ ಬೀರಿದ ಹಿನ್ನೆಲೆ ಮೊಟ್ಟೆಯ ದರ ಏರಿಕೆಯಾಗಿದೆ. ಮೊಟ್ಟೆಯ ದರ 50ರಿಂದ 60ಪೈಸೆಯಷ್ಟು ಹೆಚ್ಚಳವಾಗಿದೆ. ಬೇಸಿಗೆ ಕಾಲದಲ್ಲಿ ಸಮಾರಂಭಗಳು ಹೆಚ್ಚು ನಡೆಯುವ ಹಿನ್ನೆಲೆ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಸಾರಗೆ ವೆಚ್ಚವು ಕೂಡ ದುಬಾರಿಯಾಗಿರುವುದರಿಂದ ಅಲ್ಲದೇ ವಿದ್ಯುತ್‌ ಮತ್ತು ಕೂಲಿ ವೆಚ್ಚವು ಹೆಚ್ಚಳವಾಗಿರುವುದರಿಂದ ಇವೆಲ್ಲವುದರ ಸರಾಸರಿ ಆಧಾರದ ಮೇಲೆ ಮೊಟ್ಟೆ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ.

 

LEAVE A REPLY

Please enter your comment!
Please enter your name here