
ಮಣಿಪಾಲ: ಇಲ್ಲಿನ ಶಿಂಬ್ರ ಬಿಡ್ಜ್ ಬಳಿ ನಡೆದ ಹೊಡೆದಾಟದಲ್ಲಿ ಬ್ರಹ್ಮಾವರ ಮೂಲದ ಯುವಕನಿಗೆ ತಂಡವೊಂದು ಚೂರಿ ಇರಿದು ಕೊಲೆಗೆ ಯತ್ನಿಸಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಚೂರಿ ಇರಿತಕ್ಕೊಳಗಾದ ಯುವಕನನ್ನು ಬ್ರಹ್ಮಾವರ ನಿವಾಸಿ ಪ್ರತಾಪ್ ಎಂದು ಗುರುತಿಸಲಾಗಿದೆ. ಈತ ತಮ್ಮ ಗೆಳೆಯರಾದ ತಿಲಕ್ ಮತ್ತು ಹರ್ಷಿತ್ ಅವರೊಂದಿಗೆ ಮಣಿಪಾಲದ ಶಿಂಬ್ರ ಬ್ರಿಡ್ಜ್ ಬಳಿ ರಾತ್ರಿ ತಿರುಗಾಡಲು ಹೋಗಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳನ್ನು ಸೈಫ್ ಕುಕ್ಕಿಕಟ್ಟೆ, ಉದಾಫ್ ಚಿಟ್ಪಾಡಿ, ರಾಹುಲ್ ಶೆಟ್ಟಿ ಕಟಪಾಡಿ ಮತ್ತು ಅಫ್ರಿದಿ ದೊಡ್ಡಣಗುಡ್ಡೆ ಎಂದು ಗುರುತಿಸಲಾಗಿದೆ.
ಇನ್ನು, ಪ್ರಕರಣ ಸಂಬಂಧ ಮಣಿಪಾಲ ಠಾಣೆಯಲ್ಲಿ ಪ್ರತಿದೂರು ಕೂಡ ದಾಖಲಾಗಿದ್ದು, ಉದಾಫ್ ಎಂಬಾತನಿಗೆ ಪ್ರತಾಪ್ ಮತ್ತು ಅವರ ತಂಡ ಕೈ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಅದರಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
