
ಮಂಗಳೂರು: ಮಹೇಶ್ ಮೋಟರ್ಸ್ ನ ಮಾಲಕ ಜಯರಾಮ ಶೇಖ ಅವರ ಪುತ್ರ ಪ್ರಕಾಶ್ ಶೇಖ(42) ಅವರು ಕದ್ರಿಯ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತ್ನಿ ಹಾಗೂ ಪುತ್ರಿಯೊಂದಿಗೆ ಕದ್ರಿ ಅಪಾರ್ಟ್ ಮೆಂಟ್ ನಲ್ಲಿ ಪ್ರಕಾಶ್ ಶೇಖ ಅವರು ವಾಸವಾಗಿದ್ದರು. ರವಿವಾರ ಬೆಳಿಗ್ಗೆ ತನ್ನ ರೂಮ್ ಗೆ ಹೋಗಿದ್ದ ಅವರು ಮಧ್ಯಾಹ್ನ ಊಟಕ್ಕೂ ಬಾರದೇ ಇರುವುದನ್ನು ಕಂಡು ಪತ್ನಿ ಊಟಕ್ಕೆ ಕರೆಯಲು ಹೋದಾಗ ಬಾಗಿಲು ತೆರೆಯದೇ ಇರುವುದನ್ನು ನೋಡಿ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ಪ್ರಕಾಶ್ ಶೇಖ ಅವರು ಫ್ಯಾನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇನ್ನು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇವರ ನಿಧನಕ್ಕೆ ಸಿಟಿಬಸ್ ಮಾಲಕರ ಸಂಘ, ಬಸ್ ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪತಿಪಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
