
ಕಾಪು: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ತಾಯಿ ಸುನೀತಿ ಅಚ್ಯುತ ಸೊರಕೆಯವರು ಶನಿವಾರ ನಿಧನರಾಗಿದ್ದಾರೆ. 91 ವರ್ಷ ವಯಸ್ಸಿನವರಾಗಿದ್ದ ಇವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದರು.
ಇವರ ಅಂತ್ಯಕ್ರಿಯೆ ಇಂದು ಮಧ್ಯಹ್ನ 1:30ರ ನಂತರ ಪುತ್ತೂರು ತಾಲೂಕಿನ ಸೊರಕೆಯಲ್ಲಿ ನಡೆಯುವುದು ಎಂದು ಹೇಳಲಾಗಿದೆ. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
