
ಬೆಂಗಳೂರು: ಒಂದು ಸರ್ಕಾರ ಹೋಗಿ ಇನ್ನೊಂದು ಸರ್ಕಾರ ಬಂದ ನಂತರ ಆಗಿನ ಸರ್ಕಾರ ತಂದಿದ ಷರತ್ತುಗಳನ್ನು ಹಾಗೂ ನಿಯಮಗಳನ್ನು ಪ್ರಸ್ತುತ ಸರ್ಕಾರ ರದ್ದುಪಡಿಸಿವುದು ಸಹಜ. ಅದೇ ರೀತಿ ಇದೀಗ ಸರ್ಕಾರ ಅಧಿಕಾರದಲ್ಲಿದ್ದಾಗ ಪರಿಚಯಿಸಿದ್ದ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸಿದೆ.
ಈ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವ ರಾಜ್ಯ ಸಚಿವ ಸಂಪುಟ, ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿದೆ. ಇದರೊಂದಿಗೆ ಎಲ್ಲಾಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಲು ತೀಮಾನಿಸಿದೆ.
