Home ಕರ್ನಾಟಕ ಕರಾವಳಿ ವಿಟ್ಲ: ಕೆರೆಗೆ ಹಾರಿ ಆರ್ಟ್ ಗ್ಯಾಲರಿಯೊಂದರ ಮಾಲಕ ಆತ್ಮಹತ್ಯೆ

ವಿಟ್ಲ: ಕೆರೆಗೆ ಹಾರಿ ಆರ್ಟ್ ಗ್ಯಾಲರಿಯೊಂದರ ಮಾಲಕ ಆತ್ಮಹತ್ಯೆ

0
ವಿಟ್ಲ: ಕೆರೆಗೆ ಹಾರಿ ಆರ್ಟ್ ಗ್ಯಾಲರಿಯೊಂದರ ಮಾಲಕ ಆತ್ಮಹತ್ಯೆ

ವಿಟ್ಲ: ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ, ಎಲ್‌.ಐ.ಸಿ. ಏಜೆಂಟ್‌ ನಾರಾಯಣ ಕುಲಾಲ್‌ ಪಲೊಟ್ಟು ಎಂಬಲ್ಲಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಮುಂಜಾನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪಲೊಟ್ಟು ಎಂಬಲ್ಲಿನ ಕೆರೆಯ ಬಳಿ ವ್ಯಕ್ತಿಯ ಬೈಕ್‌, ಮೊಬೈಲ್‌, ಚಪ್ಪಲಿ ನೋಡಿದ ಸ್ಥಳೀಯರು ಸಂಶಯಗೊಂಡು ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಅಗ್ನಿಶಾಮಕ ದಳದವರಿಗೂ ಕೂಡ ಮಾಹಿತಿ ನೀಡಿರುವ ಹಿನ್ನೆಲೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಸೂರಿಕುಮೇರು ನಿವಾಸಿ ಆಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯ ಬಳಿಕ ಹೊರಬರಬೇಕಿದೆ.

 

LEAVE A REPLY

Please enter your comment!
Please enter your name here