
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಾವು ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ನಿರತವಾಗಿದೆ. ಈ ನಡುವೆ ಬೆಲೆ ಏರಿಕೆಯ ಬಿಸಿಯನ್ನೂ ಕೂಡ ಜನರಿಗೆ ಮುಟ್ಟಿಸುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಜನರಿಗೆ 200 ಯೂನಿಟ್ ಫ್ರೀ ವಿದ್ಯುತ್ ನೀಡಿರುವ ಸರ್ಕಾರ, ಮತ್ತೊಂದೆಡೆ ವಿದ್ಯುತ್ ದರವನ್ನೂ ಕೂಡ ಏರಿಕೆ ಮಾಡಿದೆ. ಇದು ಜನರ ಕಂಗೆಣ್ಣಿಗೆ ಗುರಿಯಾಗಿದೆ. ಹಿನ್ನೆಲೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.ಹೌದು, ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಚೇಂಬರ್ ಆಫ್ ಕಾಮಸ್ ಆಂಡ್ ಇಂಡಸ್ಟ್ರೀಸ್ ಜೂನ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ವಿದ್ಯುತ್ ದರ ಇಳಿಕೆ ಮಾಡುವಂತೆ ಜೂ 10 ರಂದು ಕೆಸಿಸಿಐ ರಾಜ್ಯ ಸರ್ಕಾರಕ್ಕೆ ಒಂದು ವಾರ ಗಡುವು ನೀಡಿತ್ತು. ಆದರೆ ಸರ್ಕಾರ ದರ ಇಳಿಕೆ ಮಾಡದ ನಿಟ್ಟಿನಲ್ಲಿ ಯಾವುದೇ ನಿಧಾರ ಕೈಗೊಳ್ಳದ ಹಿನ್ನೆಲೆ ಕರ್ನಾಟಕ ಬಂದ್ ಗೆ ಕರೆ ನೀಡಿದೆ.
