
ಪುತ್ತೂರು: ಪ್ರೌಢಶಾಲಾ ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪುತ್ತೂರಿನ ಪಡೀಲ್ ನಲ್ಲಿ ನಡೆದಿದೆ.
ಮೃತರನ್ನು ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ರೇಖಾ(15) ಎಂದು ಗುರುತಿಸಲಾಗಿದೆ.
ತಾಯಿಯ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ರೇಖಾಳನ್ನು ಕೊಕ್ಕಡ ಪ್ರೌಢಶಾಲೆಯಿಂದ ಪುತ್ತೂರಿನ ಪಡೀಲ್ ಹಾಸ್ಟೆಲ್ ಗೆ ಸೇರಿಸಲಾಗಿತ್ತು. ಹಾಸ್ಟೆಲ್ ಗೆ ಹೋಗಲು ಮೊದಲು ನಿರಾಕರಿಸಿದ್ದ ರೇಖಾ ಬಳಿಕ ಹಾಸ್ಟೆಲ್ ಸೇರಲು ಒಪ್ಪಿಕೊಂಡಿದ್ದಳು ಎನ್ನಲಾಗಿದೆ.
