
ಚೀನಾ: ವೀಸಾ ಸಮಸ್ಯೆಯಿಂದಾಗಿ ಪಂದ್ಯದಲ್ಲಿ ಆಡಲು ಆಗಮಿಸಿದ್ದ ಪುಟ್ಬಾಲ್ ಪ್ಲೇಯರ ಲಿಯೋನೆಲ್ ಮೆಸ್ಸಿನ ಅವರನ್ನು ಚೀನಾ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಬಳಿಕ ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.
ಲಿಯೋನೇಲ್ ಮೆಸ್ಸಿ ತನ್ನ ಟೀಮ್ ನೊಂದಿಗೆ ಪಂದ್ಯಕ್ಕಾಗಿ ಚೀನಾಕ್ಕೆ ಆಗಮಿಸಿದಾಗ ವೀಸಾ ಸಮಸ್ಯೆಯಿಂದಾಗಿ ವಿಮಾನದಲ್ಲಿನ ಭದ್ರತಾ ಸಿಬ್ಬಂದಿ ಮೆಸ್ಸಿ ಅವರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಅವರು ಸ್ಪ್ಯಾನೀಷ್ ವೀಸಾ ದೊಂದಿಗೆ ಚೀನಾಕ್ಕೆ ಪ್ರಯಾಣಿಸುತ್ತಿದ್ದರು ಎಂಉದ ಹೇಳಲಾಗಿದೆ. ಈ ಹಿನ್ನೆಲೆ ಅವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಸುಮಾರು 30 ನಿಮಿಷಗಳ ವಿಚಾರಣೆ ಬಳಿಕ ವೀಸಾ ಕಿಯರೆನ್ಸ್ ಸಿಕ್ಕ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
