
ಬೆಂಗಳೂರು: ಕಾಂಗ್ರೆಸ್ ಸಕಾರ ಚುನಾವಣಾ ಪೂವದಲ್ಲಿ ನೀಡಿದ್ದ 5ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯೂ ಕೂಡ ಒಂದು. ಇದು ಈಗಾಗಲೇ ಜಾರಿಗೆ ಬಂದು ಈ ಯೋಜನೆಯಡಿಯಲ್ಲಿ ಮಹಿಳೆಯರು ಸಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ಯೋಜನೆ ಜಾರಿಗೆ ಬಂದ ಬಳಿಕ ಹಲವೆಡೆ ಹಲವು ಸಮಸ್ಯೆಗಳು ಎದುರಾಗಿದ್ದು, ಬಸ್ ಡ್ರೈವರ್ ಕಿಟಕಿ ಕಿತ್ತು ಹಾಕಿದ್ದು, ಪುರುಷ ಪ್ರಯಾಣಿಕ ಬಸ್ ನಲ್ಲಿ ಬಂದರೆ ಕಂಡೆಕ್ಟರ್ ಗೆ ಬೈಯುವುದು, ಸೀಟ್ ರಿಸವ್ ಮಾಡಿಡುವುದು ಇಂತಹ ಹಲವಾರು ಸಮಸ್ಯೆಗಳಾಗುತ್ತಿದೆ. ಇದೀಗ ಅದಕ್ಕೂ ಮೀರಿ ಬಸ್ ನಲ್ಲಿ ತಳ್ಳಾಟ, ನೂಕಾಟ ಸೇರಿದಂತೆ ಜಡೆ ಜಗಳಗಳೂ ಸಹ ನಡೆದಿದೆ.
ಹೌದು, ಮೈಸೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿರುವಾಗ ಸೀಟ್ ಗಾಗಿ ಮಾರಾಮಾರಿ ನಡೆದಿದೆ. ಜುಟ್ಟು ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ. ಜಗಳ ಬಿಡಿಸಲು ಹೋದ ಹೆಂಗಸರು ಹೈರಾಣಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
