
ಮಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿರುವಾಗಲೇ, ಮಂಗಳೂರಿನ ಉಳ್ಳಾಲ ಅಬ್ಬಕ್ಕ ವೃತ್ತದ ಬಳಿಯೂ ಪುಂಡರು ಈದ್ ಮಿಲಾದ್ ಮೆರವಣಿಗೆ ಹೆಸರಲ್ಲಿ ಬಾವುಟ ಪ್ರದಶಿಸಿದ್ದಾ ಪುಂಡಾಟ ಮೆರೆದಿದ್ದಾರೆ. ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಉಳ್ಳಾಲ ಪೊಲೀಸರು ಆ ಯುವಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಸೆಪ್ಟೆಂಬರ್ 28 ರಂದು ಈದ್‌ಮಿಲಾದ್ ಮೆರವಣಿಗೆ ವೇಳೆ ಉಳ್ಳಾಲದ ವೀರರಾಣಿ ಅಬ್ಬಕ್ಕ ಸರ್ಕಲ್ ಹತ್ತಿ ಹಸಿರು ಬಾವುಟ ಪ್ರದಶಿಸಿದ್ದರು. ಅಲ್ಲದೇ ರಸ್ತೆ ಬಂದ್ ಮಾಡಿ ಬೈಕ್ ಹಾರ್ನ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋವನ್ನು ಆಧರಿಸಿ ಉಳ್ಳಾಲ ಪೊಲೀಸರು ಆ ಯುವಕರನ್ನು ಪತ್ತೆ ಹಚ್ಚಿದ್ದು, ಅವರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.
ಇನ್ನು, ಪ್ರಕರಣ ಸಂಬಂಧ ಮಂಜನಾಡಿ, ಮದಕ, ಬಂಟ್ವಾಳ, ಬೆಳ್ತಂಗಡಿ, ದೇರಳಕಟ್ಟೆ, ಕೊಣಾಜೆ ಹಾಗೂ ಉಳ್ಳಾಲ ಭಾಗದ ಯುವಕರಿಗೆ ವಿಚಾರಣೆಗೆ ಹಾಜರಾಗುವಂತೆ ಉಳ್ಳಾಲ ಠಾಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.
