
ನವದೆಹಲಿ: ನಟ ಪ್ರಭಾಸ್ ಅವರ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿತ್ತು. ಇದಕ್ಕಾಗಿ ಇತಿಹಾಸದಲ್ಲೇ ಅತಿದೊಡ್ಡ ಸೆಟ್‌ಅನ್ನು ನಿರ್ಮಾಣ ಮಾಡಿ ಕೋಟಿಗಟ್ಟಲೆ ಖರ್ಚುಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಸಲಾಗಿತ್ತು. ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋಸ್‌ಸಂಸ್ಥೆ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಇದೀಗ ಈ ಸಿನಿಮಾದ ಕುರಿತು ಕೆಆರ್‌ಜಿ ಸ್ಟುಡಿಯೋಸ್ ಮತ್ತೊಂದು ಅಪ್ಡೇಟ್ ನೀಡಿದ್ದು, ಸ್ಯಾಂಡಲ್ ವುಡ್‌ನ ಸೆಲಿಬ್ರೆಟಿಗಳಿಗಾಗಿ ಸಿನಿಮಾದ ಪ್ರೀಮಿಯರ್ ಶೋ ನಡೆಸಲು ತೀರ್ಮಾನಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರಾದ ಕಾತಿಕ್ ಗೌಡ, “ಜೂನ್ 16ರಂದು ಸ್ಯಾಂಡಲ್ವುಡ್ಸೆಲೆಬ್ರಿಟಿಗಾಗಿ ಆದಿಪುರುಷ್ ಸಿನಿಮಾದ ಕನ್ನಡ ವರ್ಷನ್ನ ಪ್ರೀಮಿಯರ್ ಶೋ ನಡೆಸುತ್ತೇವೆ. ಅದು ಬಹಳ ದೊಡ್ಡ ಇವೆಂಟ್ ಆಗಿರಲಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು, ಈ ಮೂವಿಯಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ಕೃತಿ ಸನೋನ್‌ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಂದು ಪೌರಾಣಿಕ ಮೂವಿಯಾಗಿದ್ದು 500 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಜೂನ್ 16ರಂದು ತೆರೆಕಾಣಲಿರುವ ಈ ಚಿತ್ರವನ್ನು ಓಂ ರಾವತ್ ಅವರು ನಿರ್ದೇಶಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರವು 3ಡಿಯ ಮೂಲಕ ತೆರೆಗೆ ಅಪ್ಪಳಿಸಿ ಪ್ರೇಕ್ಷಕರನ್ನು ರಂಜಿಸಲಿದೆ.
