
ಇಂದು ಪ್ರತಿಯೊಬ್ಬರಿಗೂ ತಮಗೊಂದು ಸ್ವಂತವಾದ ಮನೆ ಬೇಕು, ತನ್ನ ಇಚ್ಚೆಯಂತೆ ನಿರ್ಮಾಣವಾಗಬೇಕು ಎಂಬ ಕನಸು ಇರುತ್ತದೆ. ಒಂದು ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಮಾತಿದೆ. ಅಂದರೆ ಒಂದು ಮನೆ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಸ್ವಂತ ಮನೆ ಮಾಡಬೇಕಾದರೂ ಖರ್ಚು ವೆಚ್ವಗಳು ಹೆಚ್ಚಿವೆ. ಇಂದು ಮನೆಕಟ್ಟಲು ಗೃಹ ಬಳಕೆಯ ವಸ್ತುಗಳ ಬೆಲೆಯು ಹೆಚ್ಚಳವಾಗಿದೆ. ಯಾರೆಲ್ಲ ಹೊಸ ಮನೆ ನಿರ್ಮಾಣ ಮಾಡಬೇಕು ಇದ್ದಿರೋ ಅವರಿಗೆ ಗುಡ್ ನ್ಯುಸ್ ಇದೆ.
ನೀವು ಅರ್ಜಿ ಸಲ್ಲಿಸಬಹುದು
ಬಡವರಿಗೆ , ಮನೆ ಇಲ್ಲದವರಿಗೆ ಹಾಗೂ ಖಾಲಿ ಸ್ಥಳ ಇದ್ದು ಆರ್ಥಿಕ ಸಮಸ್ಯೆ ಮನೆ ಕಟ್ಟಲು ಕಷ್ಟ ಇದ್ದರೆ ಅಂಥವರಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈ ಯೋಜನೆ ಮದ್ಯಮವರ್ಗದವರಿಗೆ ಸಹಾಯಕವಾಗಲಿದೆ. ಬಡವರ ಕಷ್ಟ ನೀಗಿಸಲೆಂದೇ ಸರ್ಕಾರ ಉಚಿತ ವಸತಿ ಯೋಜನೆಯಾದ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಈ ಸೌಲಭ್ಯ ಒದಗಿಸಿದೆ.
ರಾಜೀವ್ ಗಾಂಧಿ ಯೋಜನೆ
ರಾಜೀವ್ ಗಾಂಧಿ ಯೋಜನೆ ಮೂಲಕ ನಿಮಗೆ ಮನೆ ಕಟ್ಟಲು ಸಹಾಯ ಧನ ನೀಡಲಿದೆ. ರಾಜೀವ್ ಗಾಂಧಿ ವಸತಿ ಯೋಜನೆ (Rajeev gandhi vasathi yojana) ಇದು ಜನಪರ ಯೋಜನೆಯಾಗಿದ್ದು, ಬಡವರಿಗೆ ಇದರ ಮೂಲಕ ವಸತಿ ಸೌಲಭ್ಯ ಸರ್ಕಾರದಿಂದ ಒದಗಿಸಲಾಗುತ್ತದೆ. ಈ ಯೋಜನೆಗೆ ಹಲವು ಬಡವರ್ಗದ ಜನರು ಕಾಯುತ್ತಿದ್ದು, ಈಗಾಗಲೇ ಈ ಬಗ್ಗೆ ಹಲವೆಡೆ ಮನವಿ ಬಂದ ಹಿನ್ನೆಲೆ ಶೀಘ್ರ ಜಾರಿಗೆ ಅರ್ಜಿ ಆಹ್ವಾನವನ್ನು ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಅರ್ಜಿ ಪರಿಶೀಲನೆ
ಈಗಾಗಲೇ ಈ ಯೋಜನೆಗೆ ಹಿಂದೆ ಹಲವು ವ್ಯಕ್ತಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೀಗ ಹಳೆ ಅರ್ಜಿ ಕೂಡ ಪರಿಶೀಲನೆ ಮಾಡಿ ಅರ್ಹರಿಗೆ ಈ ಯೋಜನೆ ಅಡಿಯಲ್ಲಿ ಸಹಾಯ ಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಆ ಬಳಿಕ ಹೊಸದಾಗಿ ಅರ್ಜಿ ಆಹ್ವಾನ ನೀಡಲಾಗುತ್ತದೆ.
ಷರತ್ತು ಏನು?
*ಈ ಯೋಜನೆಗೆ ಅರ್ಜಿ ಸಲ್ಲಿಸಲು ಆ ವ್ಯಕ್ತಿ ಭಾರತೀಯ ಪ್ರಜೆ ಆಗಿರಬೇಕು.
*ಆಧಾರ್ ಕಾರ್ಡ್, ಮನೆಯ ವಿಳಾಸ ಮಾಹಿತಿ ಇರಬೇಕು.
*ನಿಮ್ಮ ಸ್ವಂತ ಜಾಗ ಇದ್ದರೆ ಆರ್ ಟಿ ಸಿ ಮಾಹಿತಿ ನೀಡಬೇಕು
*ಫೋಟೋ ಅರ್ಜಿ ಸಲ್ಲಿಸುವವರದ್ದು.
*ರೇಶನ್ ಕಾರ್ಡ್, ಆಧಾರ್ ಕಾರ್ಡ್,ಬ್ಯಾಂಕ್ ಪಾಸ್ ಪುಸ್ತಕ ಇತರ ಮಾಹಿತಿ ಬೇಕು.
ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ರಾಜೀವ್ ಗಾಂಧಿ ಯೋಜನೆಯ ವೆಬ್ ಸೈಟ್ ಅಥವಾ ಗ್ರಾಮ ಪಂಚಾಯತಿಯಲ್ಲಿ ಮಾಹಿತಿ ಪಡೆಯಬಹುದು.
