Home ಕರ್ನಾಟಕ ಆದಾಯ ತೆರಿಗೆ ಪಾವತಿಸುವ ತಾಯಿಗೂ ಲಭ್ಯವಿದೆ ಗೃಹಲಕ್ಷ್ಮೀ ಯೋಜನೆ

ಆದಾಯ ತೆರಿಗೆ ಪಾವತಿಸುವ ತಾಯಿಗೂ ಲಭ್ಯವಿದೆ ಗೃಹಲಕ್ಷ್ಮೀ ಯೋಜನೆ

ಬೆಂಗಳೂರು:ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳನ್ನ ಕಾರ್ಯಗತ ತರುವಲ್ಲಿ ನಿರತವಾಗಿದೆ. ಭರವಸೆ ನೀಡಿದಷ್ಟು ಸುಲಭವಾಗಿ ಅದನ್ನು ಅನುಷ್ಟಾನಗೊಳಿಸುವುದು ಸಾಧ್ಯವಿಲ್ಲ. ಆದರೂ ಕೂಡ ಎಲ್ಲಾ ಯೋಜನೆಗಳನ್ನು ಅನುಷ್ಠನಗೊಳಿಸುತ್ತಿದೆ. ಈ ನಡುವೆ ಎಲ್ಲಾ ಯೋಜನೆಗಳಲ್ಲೂ ಹಲವಾರು ಗೊಂದಲಗಳು ತಲೆದೂರುತ್ತಿವೆ. ಹೀಗಾಗಿ ಸಕಾರ ಪ್ರತಿಯೊಂದು ಗೊಂದಲಕ್ಕೂ ಸ್ಪಷ್ಟನೆ ನೀಡುತ್ತಾ ಬಂದಿದ್ದು, ಇದೀಗ ಗೃಹಲಕ್ಷ್ಮೀ ಯೊಜನೆಯ ಕುರಿತು ಸೃಷ್ಟಿಯಾಗಿರುವ ಮತ್ತೊಂದು ಗೊಂದಲಕ್ಕೆ ಸ್ಪಷ್ಟನೆ ನೀಡಿದೆ.
ಜಿಎಸ್‌ಟಿ ರಿಟರ್ನ್ಸ್ ಮಾಡುವವರ ಹಾಗೂ ಆದಾಯ ತೆರಿಗೆ ಪಾವತಿದಾರರ ತಾಯಿಗೆ ಕೂಡ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಲಭ್ಯವಾಗುವುದಿಲ್ಲ ಎನ್ನುವ ಮಾಹಿತಿ ಹರಿದಾಡುತ್ತಿತ್ತು. ಆದರೆ ಇದಕ್ಕೆ ಸ್ಷಷ್ಟನೆ ನೀಡಿರುವ ಸರ್ಕಾರ ಮಗ ತೆರಿಗೆ ಪಾವತಿಸಿದ್ದರೂ ತಾಯಿಗೆ ಗೃಹಲಕ್ಷ್ಮೀ ಯೋಜನೆಯಡಿ 2000 ರೂ ಸಿಗುತ್ತದೆ ಎಂದಿದ್ದಾರೆ. ಇನ್ನು, ಗೃಹಲಕ್ಷ್ಮೀ ಯೋಜನೆ ಮಾರ್ಗಸೂಚಿ ಪ್ರಕಟಿಸಿದಾಗ ಜಿಎಸ್‌ಟಿ ರಿಟರ್ನ್ಸ್ ಮಾಡುವವರ ಹಾಗೂ ಆದಾಯ ತೆರಿಗೆ ಪಾವತಿದಾರರ ಹೆಂಡತಿಯರಿಗೆ 2000 ರೂ ದೊರಕುವುದಿಲ್ಲ ಎಂದು ಹೇಳಲಾಗಿತ್ತು.

 
Previous articleಇನ್ಮುಂದೆ ಒಂಟಿ ಪೋಷಕ ಪುರುಷ ಸರ್ಕಾರಿ ನೌಕರರಿಗೂ ಸಿಗಲಿದೆ ಶಿಶುಪಾಲನಾ ರಜೆ
Next articleರಾಜ್ಯಕ್ಕೆ ಎಂಟ್ರಿ ಕೊಟ್ಟ ವರುಣ: ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್