Home ಸಿನೆಮಾ ಇನ್ನೆರಡು ದಿನಗಳಲ್ಲಿ ತೆರೆಮೇಲೆ ಬರಲಿದೆ ಆದಿಪುರುಷ್‌ ಸಿನಿಮಾ: 1.50 ಲಕ್ಷ ಟಿಕೆಟ್‌ ಸೋಲ್ಡ್‌ ಔಟ್‌

ಇನ್ನೆರಡು ದಿನಗಳಲ್ಲಿ ತೆರೆಮೇಲೆ ಬರಲಿದೆ ಆದಿಪುರುಷ್‌ ಸಿನಿಮಾ: 1.50 ಲಕ್ಷ ಟಿಕೆಟ್‌ ಸೋಲ್ಡ್‌ ಔಟ್‌

0
ಇನ್ನೆರಡು ದಿನಗಳಲ್ಲಿ ತೆರೆಮೇಲೆ ಬರಲಿದೆ ಆದಿಪುರುಷ್‌ ಸಿನಿಮಾ: 1.50 ಲಕ್ಷ ಟಿಕೆಟ್‌ ಸೋಲ್ಡ್‌ ಔಟ್‌

ನವದೆಹಲಿ: ನಟ ಪ್ರಭಾಸ್‌ಅವರ ಬಹುನಿರೀಕ್ಷಿತ ಆದಿಪುರುಷ್‌ ಸಿನಿಮಾದ ಪ್ರೀ ರಿಲೀಸ್‌ ಇವೆಂಟ್‌ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿತ್ತು. ಇದಕ್ಕಾಗಿ ಇತಿಹಾಸದಲ್ಲೇ ಅತಿದೊಡ್ಡ ಸೆಟ್‌ಅನ್ನು ನಿರ್ಮಾಣ ಮಾಡಿ ಕೋಟಿಗಟ್ಟಲೆ ಖರ್ಚುಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಸಲಾಗಿತ್ತು. ಇದೀಗ ಈ ಸಿನಿಮಾದ ಕುರಿತು ಮತ್ತೊಂದು ಬಿಗ್‌ಅಪ್ಡೇಟ್‌ದೊರೆತಿದ್ದು, ಇನ್ನೆರಡು ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ ಈ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದ್ದು, ಈಗಾಗಲೇ 1.50ಲಕ್ಷ ಟಿಕೆಟ್‌ ಮಾರಾಟವಾಗಿದೆ.
ಹೌದು, ಸಕಷ್ಟು ನಿರೀಕ್ಷೆ ಮೂಡಿಸಿರುವ ಆದಿಪುರುಷ್‌ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ ಈ ಸಿನಿಮಾದ ಟಿಕೇಟ್‌ ಖರೀದಿಗೆ ಪ್ರೇಕ್ಷಷಕರು ಮುಗಿಬೀಳುತ್ತಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾದ 1.50ಲಕ್ಷ ಟಿಕೆಟ್‌ ಗಳು ಈಗಾಗಲೇ ಸೋಲ್ಡ್‌ ಔಟ್‌ ಆಗಿವೆ. ಅಲ್ಲದೇ ಬಾಲಿವುಡ್‌ನಟ

ರಣಬೀರ್‌ಕಪೂರ್‌ಅವರು ಸಿನಿಮಾ ನೋಡಲು 10,000 ಟಿಕೆಟ್‌ಗಳನ್ನು ಈಗಾಗಲೇ ಬುಕ್ಕಿಂಗ್‌ಮಾಡಿದ್ದಾರೆ. ಹಿಂದುಳಿದ ಮಕ್ಕಳಿಗೆ ಈ ಸಿನಿಮಾವನ್ನು ತೋರಿಸುವ ಸಲುವಾಗಿ ಟಿಕೆಟ್‌ಕಾಯ್ದಿರಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ತೆಲಂಗಾಣದಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳು, ವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳಿಗೆ 10,000 ಉಚಿತ ಟಿಕೆಟ್‌ಗಳನ್ನು ನೀಡಲು ನಿರ್ಮಾಪಕ ಅಭಿಷೇಕ್‌ ಅಗರ್ವಾಲ್‌ ಮುಂದಾಗಿದ್ದಾರೆ.


ಇನ್ನು, ಈ ಮೂವಿಯಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ಕೃತಿ ಸನೋನ್‌ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಂದು ಪೌರಾಣಿಕ ಮೂವಿಯಾಗಿದ್ದು 500 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಜೂನ್‌ 16ರಂದು ತೆರೆಕಾಣಲಿರುವ ಈ ಚಿತ್ರವನ್ನು ಓಂ ರಾವತ್ ಅವರು ನಿರ್ದೇಶಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರವು 3ಡಿಯ ಮೂಲಕ ತೆರೆಗೆ ಅಪ್ಪಳಿಸಿ ಪ್ರೇಕ್ಷಕರನ್ನು ರಂಜಿಸಲಿದೆ.

 

LEAVE A REPLY

Please enter your comment!
Please enter your name here