Home ಕರ್ನಾಟಕ ಕನಾಟಕಕ್ಕೆ ಮತ್ತೊಂದು ಶಾಕ್‌ : ಅಕ್ಟೋಬರ್‌ 15 ರವರೆಗೆ ತಮಿಳುನಾಡಿಗೆ ನೀರು ಬಿಡಲು ಆದೇಶ

ಕನಾಟಕಕ್ಕೆ ಮತ್ತೊಂದು ಶಾಕ್‌ : ಅಕ್ಟೋಬರ್‌ 15 ರವರೆಗೆ ತಮಿಳುನಾಡಿಗೆ ನೀರು ಬಿಡಲು ಆದೇಶ

0
ಕನಾಟಕಕ್ಕೆ ಮತ್ತೊಂದು ಶಾಕ್‌ : ಅಕ್ಟೋಬರ್‌ 15 ರವರೆಗೆ ತಮಿಳುನಾಡಿಗೆ ನೀರು ಬಿಡಲು ಆದೇಶ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುವುದನ್ನು ವಿರೋಧಿಸಿ ಈಗಾಗಲೇ ಕಿಚ್ಚು ಹತ್ತಿದ್ದು, ಈ ನಡುವೆ ಇದೀಗ ಕರ್ನಾಟಕಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಈ ವಿಚಾರವಾಗಿ ಕಾವೇರಿ ನಿರ್ವಹಣ ಪ್ರಾಧಿಕಾರ ಕರೆದಿದ್ದ ತುರ್ತು ಸಭೆಯಲ್ಲಿ ಸಿಡಬ್ಲ್ಯೂಆರ್ಸಿ ಆದೇಶ ಪಾಲಿಸುವಂತೆ ಸಿಡಬ್ಲ್ಯೂಎಮ್‌ಎ ಕರ್ನಾಟಕಕ್ಕೆ ಸೂಚನೆ ನೀಡಿದೆ.


ಈ ಆದೇಶಲ್ಲಿ ಸೂಚಿಸಿರುವಂತೆ ಅಕ್ಟೋಬರ್‌ 15 ರವರೆಗೆ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ತಿಳಿಸಲಾಗಿದೆ. ರಾಜ್ಯದಲ್ಲಿ ಕಾವೇರಿ ವಿವಾದ ಭುಗಿಲೆದ್ದಿದ್ದು, ಕರವೇ ಕಾರ್ಯಕರ್ತರು ಹಾಗೂ ಹಲವು ರೈತ ಸಂಘಟನೆಗಳು ಇಂದು ಕನಾಟಕ ಬಂದ್‌ ಗೆ ಕರೆಕೊಟ್ಟಿದ್ದರು. ಬಂದ್‌ ಹಿನ್ನೆಲೆ ಸಿಎಂ ಮನೆಮುಂದೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.


ಇನ್ನು, ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು ಎನ್ನುವುದು ನಮ್ಮ ಅಭಿಪ್ರಾಯ ಕೂಡ ಆಗಿದೆ. ಇಂದು ಸಂಜೆ ತಜ್ಞರ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here