Home ಸಿನೆಮಾ ಕನ್ನಡದ ಕನಕಮಾರ್ಗ ಸಿನಿಮಾಕ್ಕೆ ಸಿಕ್ತು ತೆರಿಗೆ ವಿನಾಯ್ತಿ: ರಾಜ್ಯ ಸರ್ಕಾರ ಆದೇಶ

ಕನ್ನಡದ ಕನಕಮಾರ್ಗ ಸಿನಿಮಾಕ್ಕೆ ಸಿಕ್ತು ತೆರಿಗೆ ವಿನಾಯ್ತಿ: ರಾಜ್ಯ ಸರ್ಕಾರ ಆದೇಶ

0
ಕನ್ನಡದ ಕನಕಮಾರ್ಗ ಸಿನಿಮಾಕ್ಕೆ ಸಿಕ್ತು ತೆರಿಗೆ ವಿನಾಯ್ತಿ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಬೆಳಗಾವಿಯ ಅವ್ವ ಪ್ರೊಡಕ್ಷನ್ಸ್‌ ನಿಂದ ಮೂಡಿಬಂದಿರುವ ಮಕ್ಕಳ ಚಿತ್ರ ಕನಕಮಾರ್ಗ ಸಿನಿಮಾಕ್ಕೆ ತೆರಿಗೆ ವಿನಾಯ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಿನಿಮಾ ಬಿಡುಗಡೆಯಾದ ದಿನಾಂಕದಿಂದ ಆರು ತಿಂಗಳವರೆಗೆ ತೆರಿಗೆ ವಿನಾಯ್ತಿಯನ್ನು ನೀಡಿದೆ.
ಈ ಬಗ್ಗೆ ಬೆಳಗಾವಿಯ ಅವ್ವ ಪ್ರೊಡಕ್ಷನ್ಸ್ ನಿರ್ಮಾಪಕರು ಸಲ್ಲಿಸಿರುವ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಿವುದರಿಂದ ರಾಜ್ಯದ ಜನರಿಗೆ ಉತ್ತಮ ಸಂದೇಶ ತಲುಪುವ ಹಿನ್ನೆಲೆ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಸರ್ಕಾರಿ ಶಾಲೆಗಳ ಮಹತ್ವ, ಈ ನಾಡಿನ ಕಲೆ, ಸಂಸ್ಕೃತಿಯನ್ನು ತೋರಿಸಲಾಗಿದೆ. ಇದು ಮಕ್ಕಳು ಹಾಗೂ ಯುವಕರ ಮೇಲೆ ಉತ್ತಮ ಪರಿಣಾಮವನ್ನು ಬೀರುವ ಸಿನಿಮಾವಾಗಿದ್ದು, ಚಿತ್ರಕ್ಕೆ ತೆರಿಗೆ ವಿನಾಯ್ತಿಯನ್ನು ನೀಡಲಾಗಿದೆ.

 

LEAVE A REPLY

Please enter your comment!
Please enter your name here