Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ಯೋಜನೆ ಹಣ ಎಷ್ಟು?

ಕಿಸಾನ್ ಸಮ್ಮಾನ್ ಯೋಜನೆ ಹಣ ಎಷ್ಟು?

0
ಕಿಸಾನ್ ಸಮ್ಮಾನ್ ಯೋಜನೆ ಹಣ ಎಷ್ಟು?

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯ ‌ಪಡೆಯುವ ರೈತರಿಗೆ ಮಹತ್ವದ ಮಾಹಿತಿ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೃಷಿ ಅಭಿವೃದ್ಧಿ ಚಟುವಟಿಕೆಗಳಿಗೆ ಮೊದಲಿಂದಲೂ ಪ್ರೋತ್ಸಾಹ ನೀಡುತ್ತಲೇ ಬಂದಿವೆ. ರೈತಾಪಿ ವರ್ಗದವರನ್ನು ಸದೃಢವಾಗಿ ಮಾಡಲು ಅನೇಕ ರೀತಿಯ ಆರ್ಥಿಕ ಸಹಾಯ ಧನ ಕೂಡ ನೀಡ್ತಾ ಇದೆ. ಅಂತಹ ಯೋಜನೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (Kisan samman Yojana) ಕೂಡ ಒಂದು, ಈ ಯೋಜನೆ ಮೂಲಕ ಅನೇಕ‌ ರೈತರು ಸಹಾಯಧನ ಪಡೆದಿದ್ದಾರೆ.

ಇದು ಕೇಂದ್ರ ಸರ್ಕಾರದ ಮುಖ್ಯ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಕೃಷಿಯನ್ನೆ ನಂಬಿ ಬದುಕಿರುವ ರೈತರಿಗೆ ಮಾಸಿಕ ಹಣ ನೀಡುವ‌ ಯೋಜನೆ ಇದಾಗಿದೆ. ರೈತರಿಗೆ ಆರ್ಥಿಕ ಬೆಂಬಲ ನೀಡುವ ಯೋಜನೆ ಇದಾಗಿದ್ದು, ತಿಂಗಳಿಗೆ ಎರಡು ಸಾವಿರ ರೂಪಾಯಿ ಹಣ ಈ ಯೋಜನೆಯ ಮೂಲಕ ಪಡೆಯುತ್ತಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಇಲ್ಲಿವರೆಗೆ 14ಕಂತುಗಳನ್ನು ನೀಡಲಾಗಿದ್ದು, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಜಮಾ ಮಾಡಲಾಗಿದೆ. ನಾಲ್ಕು ತಿಂಗಳಿಗೊಮ್ಮೆ ಮೂರು ಕಂತಿನಂತೆ ತಲಾ ಎರಡು ಸಾವಿರ ರೂ. (2000Rs.) ನೀಡಲಾಗುತ್ತಿದ್ದು ವಾರ್ಷಿಕವಾಗಿ ರೈತರಿಗೆ ಆರು ಸಾವಿರ ರೂ. ನೀಡಲಾಗುತ್ತಿದೆ.

ಇಕೆವೈಸಿ ಮಾಡುವುದು ಕಡ್ಡಾಯ
ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆಯುತ್ತಿದ್ದರೆ, ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಪಾಸ್ ಪುಸ್ತಕ ಲಿಂಕ್ ಮಾಡಿಸುವುದು ಸಹ ಕಡ್ಡಾಯವಾಗಿದೆ. ಈ ಕೆಲಸ ಮಾಡದೇ ಇದ್ದಲ್ಲಿ ಈ ಹಣ ನಿಮಗೆ ಜಮೆಯಾಗುವುದಿಲ್ಲ. ಹಾಗಾಗಿ ರೈತರು ಈ ಕೆಲಸವನ್ನು ಮೊದಲು ಮಾಡಬೇಕಾಗಿದೆ.

ಮಹತ್ವದ ಮಾಹಿತಿ
ಕೆಲವು ವ್ಯಕ್ತಿಗಳು ಈ ಯೋಜನೆ ಯನ್ನು ದುರುಪಯೋಗ ಮಾಡಿಕೊಂಡಂತಹ ದಾಖಲೆಗಳು ಲಭ್ಯವಾಗಿದ್ದು, ಈ ಮೂಲಕ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಈ ಯೋಜನೆಯ ಕಂತಿನ ಹಣ ಹಿಂಪಡೆಯಲಾಗುವುದು ಎಂದು ಮಾಹಿತಿಗಳು ಲಭ್ಯವಾಗಿದೆ. ಅನರ್ಹ ರೈತರಿಗೆ ನೋಟಿಸ್ (Notice) ಕಳುಹಿಸಿ ಬ್ಯಾಂಕ್ ಖಾತೆ ಸ್ಥಗಿತ ಮಾಡಲಾಗುವುದು ಎನ್ನಲಾಗಿದೆ.

 

LEAVE A REPLY

Please enter your comment!
Please enter your name here