Home ಕರ್ನಾಟಕ ಗೃಹಲಕ್ಷ್ಮೀ ಯೋಜನೆ ಅರ್ಜಿ- ಸಲ್ಲಿಕೆಗೆ ಮತ್ತೆ ವಿಘ್ನ: 4-5 ದಿನ ಮುಂದೂಡಿದ ಸರ್ಕಾರ

ಗೃಹಲಕ್ಷ್ಮೀ ಯೋಜನೆ ಅರ್ಜಿ- ಸಲ್ಲಿಕೆಗೆ ಮತ್ತೆ ವಿಘ್ನ: 4-5 ದಿನ ಮುಂದೂಡಿದ ಸರ್ಕಾರ

ಬೆಂಗಳೂರು: ಕಾಂಗ್ರೆಸ್‌ ನ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಇಂದಿನಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮಾಹಿತಿ ನೀಡಿದ್ದರು. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗುತ್ತದೆ ಆಗಸ್ಟ್‌ 18ಕ್ಕೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆ ದಿನಾಂಕದಲ್ಲಿ ಕೊಂಚ ಬದಲಾವಣೆಯಾಗಿದ್ದು ಇನ್ನು ಸ್ವಲ್ಪ ದಿನ ಕಾಯಬೇಕಿದೆ.
ಹೌದು, ಗೃಹಲಕ್ಷ್ಮೀ ಯೋಜನೆ ಆ್ಯಪ್ ನಲ್ಲಿ ಕೆಲವೊಂದು ಅಪ್ಡೇಟ್‌ ಮಾಡಬೇಕಾಗಿರುವುದರಿಂದ ಅರ್ಜಿ ಸಲ್ಲಿಕೆಗೆ ಇನ್ನೂ 4-5ದಿನ ಕಾಯಬೇಕಾಗಿದೆ. ಅಷ್ಟೇ ಅಲ್ಲದೇ ಈ ಅಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ಇಲ್ಲ. ವರ್ಷಪೂರ್ತಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 
Previous articleಡಿಸಿಎಂ ಡಿ.ಕೆ.ಶಿವಕುಮಾರ್‌ ಮೇಲಿದ್ದ ಐದು ಪ್ರಕರಣಗಳು ರದ್ದು: ಹೈಕೋರ್ಟ್ ಆದೇಶ
Next articleಮಂಗಳೂರಿನಲ್ಲಿ ಸ್ಥಾಪನೆಯಾಯ್ತು ಆಯಂಟಿ ಕಮ್ಯುನಲ್‌ ವಿಂಗ್:‌ ಎಲ್ಲಾ ಕೋಮು ಪ್ರಕರಣಕ್ಕೂ ಬ್ರೇಕ್