Home ಕರ್ನಾಟಕ ಗ್ಯಾರಂಟಿಗಳ ಈಡೇರಿಕೆಯಲ್ಲಿರುವ ಸರ್ಕಾರಕ್ಕೆ ಎದುರಾಯ್ತು ಮತ್ತೊಂದು ತಲೆನೋವು

ಗ್ಯಾರಂಟಿಗಳ ಈಡೇರಿಕೆಯಲ್ಲಿರುವ ಸರ್ಕಾರಕ್ಕೆ ಎದುರಾಯ್ತು ಮತ್ತೊಂದು ತಲೆನೋವು

ಕೋಲಾರ: ಕಾಂಗ್ರೆಸ್‌ ಸರ್ಕಾರ ಚುನಾವಣೆಯ ಸಂದರ್ಭ ಕಾಂಗ್ರೆಸ್‌ ಸರ್ಕಾರ 5ಗ್ಯಾರಂಟಿಗಳ ಜೊತೆಗೆ ಇನ್ನು ಹಲವು ಭರವಸೆಗಳನ್ನು ನೀಡಿತ್ತು. ಈ ಗ್ಯಾರಂಟಿಗಳ ಈಡೇರಿಕೆ ಭರದಲ್ಲಿ ಸರ್ಕಾರ ಇನ್ನುಳಿದ ಭರವಸೆಗಳ ಗೋಜಿಗೆ ಹೋಗಿರಲಿಲ್ಲ. ಆದರೆ ಓಟು ನೀಡಿರುವ ಮತದಾರರು ಮಾತ್ರ ಸರ್ಕಾರ ನೀಡಿದ್ದ ಯಾವ ಭರವಸೆಗಳನ್ನೂ ಕೂಡ ಮರೆಯದೇ ಎಲ್ಲವನ್ನೂ ಕೂಡ ಸರ್ಕಾರಕ್ಕೆ ನೆನಪು ಮಾಡುತ್ತಿದೆ. ಅಂತಹ ಭರವಸೆಗಳಲ್ಲಿ ಇದೀಗ ಸ್ತ್ರೀ ಶಕ್ತಿ ಸಾಲ ಮನ್ನ ಕೂಡ ಒಂದಾಗಿದೆ.
ಹೌದು, ಚುನಾವಣಾ ಪೂರ್ವದಲ್ಲಿ ಡಿಸಿಸಿ ಬ್ಯಾಂಕ್‌ ನಿಂದ ನೀಡಿದ್ದ ಸ್ರ್ತೀ ಶಕ್ತಿ ಸಂಘಗಳ ಸಾಲವನ್ನೆಲ್ಲಾ ಮನ್ನ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. ಈ ಹಿನ್ನೆಲೆ ಕೋಲಾರದಲ್ಲಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸಿದ್ದರಾಮಯ್ಯ ಮತ್ತು ಎಮ್‌ಎಲ್‌ಸಿ ನಸೀರ್‌ ಅಹಮದ್‌ ನೀಡಿರುವ ಆಶ್ವಾಸನೆಯಂತೆ ಸಾಲ ಮನ್ನ ಮಾಡಬೇಕು. ನಾವು ಸಾಲ ತೀರಿಸುವುದಿಲ್ಲ ಎಂದು ಸಾಲ ವಸೂಲಾತಿಗೆ ಬಂದ ಬ್ಯಾಂಕ್‌ ಸಿಬ್ಬಂದಿಯನ್ನು ವಾಪಸ್‌ ಕಳುಸಿರುವ ಘಟನೆ ನಡೆದಿದೆ.
ಒಟ್ಟಾರೆಯಾಗಿ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ನೀಡಿದ್ದ ಭರವಸೆ ಇದೀಗ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 5ಗ್ಯಾರಂಟಿಗಳ ಈಡೇರಿಕೆಯಲ್ಲಿ ನಿರತವಾಗಿರುವ ಸರ್ಕಾರಕ್ಕೆ ಇದೀಗ ಕೊಟ್ಟಿರುವ ಭರವಸೆಗಳು ಬಿಸಿ ತುಪ್ಪವಾಗಿ ಪರಿಣಮಿಸಿದೆ.

 
Previous articleಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: ಉಡುಪಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ
Next articleಜನರಲ್ಲಿ ಸುರಕ್ಷತೆಯ ಭಾವ ಮೂಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ: ಸಿಎಂ ಸಿದ್ದರಾಮಯ್ಯ