ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರು ವರ್ಷ ಕಳೆದಿದೆ. ಇವರ ಹಠಾತ್ ನಿಧನದಿಂದ ಸಿನಿ ಲೋಕಕ್ಕೆ, ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಭಾರೀ ಆಘಾತವಾಗಿತ್ತು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲವಾದರೂ ಕೂಡ ಅವರ ನೆನಪು ಮಾತ್ರ ಅಜರಾಮರ.
ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾಮ್ ಹೌಸ್ ನಲ್ಲಿ ಚಿರು ಸಮಾಧಿ ಇದ್ದು, ಕುಟುಂಬಸ್ಥರು ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಮಘನಾ ರಾಜ್, ಸಹೋದರ ಧ್ರುವ ಸರ್ಜಾ ಸೇರಿದಂತೆ ಹಲವರು ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಚಿರಂಜೀವಿ ಸರ್ಜಾ ನಿಧನ ಹೊಂದಿದಾಗ ಪತ್ನಿ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ಬಳಿಕ ಅಕ್ಟೋಬರ್ 22 ರಂದು ರಾಯನ್ ಸರ್ಜಾ ಜನನವಾಯಿತು. ಮೇಘನಾ ರಾಜ್ ಸೇರಿದಂತೆ, ಸರ್ಜಾ ಕುಟುಂಬ ರಾಯನ್ ಸರ್ಜಾರಲ್ಲಿಯೇ ಚಿರಂಜೀವಿ ಸರ್ಜಾರನ್ನು ಕಾಣುತ್ತಿದ್ದಾರೆ.
ಹಿರಿಯ ನಟ ಶಕ್ತಿ ಪ್ರಸಾದ್ ಮೊಮ್ಮಗ, ಅರ್ಜುನ್ ಸರ್ಜಾರ ಬಹು ಹತ್ತಿರದ ಸಂಬಂಧಿ ಆಗಿರುವ ಚಿರು ಸರ್ಜಾ, 2009 ರಲ್ಲಿ ‘ವಾಯುಪುತ್ರ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಎರಡು ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಚಿರಂಜೀವಿ ಸರ್ಜಾ ನಟಿಸಿದ ಕೊನೆಯ ಸಿನಿಮಾ ‘ರಾಜ ಮಾರ್ತಾಂಡ’.
