Home ಸಿನೆಮಾ ನಿಶ್ಚಿತಾರ್ಥ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್:‌ ಸಾಮಾಜಿಕ ಜಾಲತಾಣದಲ್ಲಿ ರಿವೀಲ್

ನಿಶ್ಚಿತಾರ್ಥ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್:‌ ಸಾಮಾಜಿಕ ಜಾಲತಾಣದಲ್ಲಿ ರಿವೀಲ್

0
ನಿಶ್ಚಿತಾರ್ಥ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್:‌ ಸಾಮಾಜಿಕ ಜಾಲತಾಣದಲ್ಲಿ ರಿವೀಲ್

ಬಿಗ್‌ ಬಾಸ್‌ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್‌ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯವರು ತೋರಿಸಿರುವ ಹುಡುಗಿಯ ಜೊತೆಗೆ ಎಂಗೇಜ್‌ಮೆಂಟ್‌ ಮಾಡಿಕೊಂಡರುವ ನಟ ಪ್ರಥಮ್‌ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್​ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗೇ ಇರೋಕೆ ಇಷ್ಟ. ನಾನು ಎಂಗೇಜ್​ಮೆಂಟ್ ಆಗಿರೋದು ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ;ಹೀಗೇ ಇದ್ದು ಬಿಡ್ತೀನಿ‌..ಹರಸುವವರು ಅಲ್ಲಿಂದಲೇ ಹರಸಿ. ಅದೇ ಆಶೀರ್ವಾದ‌” ಎಂದು ಬರೆದು ಕೊಂಡಿದ್ದಾರೆ.
ಇನ್ನು, ನಟ ಪ್ರಥಮ್‌ ಅವರು ತಾವು ಮದುವೆಯಾಗುತ್ತಿರುವ ಹುಡುಗಿ ಯಾರೆಂಬುದನ್ನು ಮಾತ್ರ ರಿವೀಲ್‌ ಮಾಡಿಲ್ಲ. ಕೇವಲ ಇಬ್ಬರ ಕೈಗಳ ಫೋಟೋವನ್ನು ಮಾತ್ರ ಅಪ್ಲೋಡ್‌ ಮಾಡುವ ಮೂಲಕ ಸುದ್ದಿ ರಿವೀಲ್‌ ಮಾಡಿದ್ದಾರೆ.‌

 

LEAVE A REPLY

Please enter your comment!
Please enter your name here