
ನಮ್ಮ ಆರೋಗ್ಯ ರಕ್ಷಣೆ ನಮ್ಮದೇ ಕೈಯಲ್ಲಿ ಇದೆ. ನಮ್ಮ ಆರೋಗ್ಯ ಕ್ರಮಗಳನ್ನುಸರಿಯಾಗಿ ಪಾಲಿಕೆ ಮಾಡಿದ್ರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಇಂದು ಹೊರಗಿನ ಕರಿದ ಆಹಾರ ಪದಾರ್ಥ ಗಳನ್ನು ಸೇವನೆ ಮಾಡಿದ್ರೆ ದೇಹಕ್ಕೆ ಅಷ್ಟೆ ಪ್ರಮಾಣದ ಹಾನಿಕಾರಕವೂ ಇದೆ. ಹಾಗಾಗಿ ನಮ್ಮ ದೇಹದ ರಕ್ಷಣೆ ಯನ್ನು ನಾವೇ ಮಾಡಬೇಕಿದೆ. ಅದಕ್ಕಾಗಿ ಸೊಪ್ಪು, ತರಕಾರಿ ಹಣ್ಣು ಹಂಪಲುಗಳ ಸೇವನೆ ಕೂಡ ಮಾಡಬೇಕಿದೆ. ಇನ್ನು ನುಗ್ಗೆ ಸೊಪ್ಪು ನೀವು ಕೇಳಿರುತ್ತೀರಿ, ಇದರ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಬಳಕೆ ಮಾಡುತ್ತಿದ್ದರು. ನುಗ್ಗೆ ಸೊಪ್ಪಿನಲ್ಲಿ ಬಹಳಷ್ಟು ಪ್ರಮಾಣದ ಪೌಷ್ಟಿಕಾಂಶ ಸತ್ವಗಳು ಇರುವುದರಿಂದ ದೇಹಕ್ಕೆ ಬಹಳ ಒಳ್ಳೆಯದು. ಶೇಖಡಾ 5 ರಷ್ಟು ವಿಟಮಿನ್ ಎ ಅಂಶ ಹೆಚ್ಚಾಗಿದೆ.
ಸಕ್ಕರೆ ಕಾಯಿಲೆ ಗುಣಪಡಿಸಲು ನೆರವಾಗುತ್ತದೆ
ನುಗ್ಗೆಸೊಪ್ಪಿನಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇದ್ದು, ಇದು ಆಂಟಿ ಡಯಾಬಿಟಿಕ್ ಮತ್ತು ಆಂಟಿ ಆಕ್ಸಿಡೆಂಟ್ ವಸ್ತುಗಳಿಂದ ಕೂಡಿದೆ. ಇದು ಮಧುಮೇಹಿ ರೋಗಿಗಳಿಗೆ ಬಹಳಷ್ಟು ಒಳ್ಳೆಯದು. ಇದರಿಂದ ಮಧುಮೇಹವನ್ನು ಹತೋಟಿಗೆ ತರಬಹುದು.
ಬಾಣಂತಿಯರಲ್ಲಿ ಎದೆ ಹಾಲಿನ ಕೊರತೆ ಇದ್ದರೆ ಇದನ್ನು ಸೇವಿಸಿ
ನುಗ್ಗೆ ಸೊಪ್ಪನ್ನು ಸೇವಿಸದರೆ ಆರೋಗ್ಯಕ್ಕೂ ಒಳಿತು. ಇದರಲ್ಲಿ ಅಧಿಕ ಪೋಷಕಾಂಶಗಳಿದ್ದು, ಬಾಣಂತಿ ತಾಯಿಗೆ ಇದರಿಂದ ಹಲವು ರೀತಿಯ ಉಪಯೋಗಗಳು ಇದೆ. ಹೌದು ತಾಯಿಯಲ್ಲಿ ಹಾಲಿನ ಅಂಶ ಕಡಿಮೆ ಇದ್ದರೆ, ಈ ಸೊಪ್ಪನ್ನು ಪಲ್ಯ ಮಾಡಿ ತಿನ್ನುವುದರಿಂದ ಗರ್ಭಿಣಿಯರ ಆರೋಗ್ಯಕ್ಕೂ ಸಹಕಾರಿಯಾಗಿ, ಎದೆಯಲ್ಲಿ ಹಾಲಿನ ಅಂಶ ಹೆಚ್ಚಾಗಲು ಕಾರಣವಾಗುತ್ತದೆ.
ಕ್ಯಾಲ್ಸಿಯಂ ಪ್ರಮಾಣ ಅಧಿಕ
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿಣ ಅಂಶಗಳು ಇದ್ದು, ದೇಹದಲ್ಲಿ ಇನ್ ಫೆಕ್ಷನ್ ಆಗಿದ್ದರೆ, ಇದು ಸಹಕಾರಿಯಾಗುತ್ತದೆ. ದೇಹದ ಉರಿಯೂತಗಳನ್ನು ಶಮನ ಮಾಡುವ ಆರೋಗ್ಯಕರ ಗುಣವನ್ನು ಕೂಡ ಇದು ಹೊಂದಿದೆ.
ಹೃದಯದ ರಕ್ಷಣೆಗೂ ಉತ್ತಮ
ಇನ್ನೂ ಹೆಚ್ಚಾಗಿ ನುಗ್ಗೆ ಸೊಪ್ಪು ತಿನ್ನುವುದರಿಂದ ಹೃದಯಾಘಾತದ ಸಮಸ್ಯೆ ಗಳನ್ನು ಕಡಿಮೆ ಮಾಡಿ, ಹೃದಯದ ರಕ್ಷಣೆ ಮಾಡುತ್ತದೆ. ಅಲ್ಲದೇ ದೇಹದ ತೂಕ ಇಳಿಸುವುದಕ್ಕೂ ಈ ಸೊಪ್ಪು ಬಹಳಷ್ಟು ಸಹಾಯ ಮಾಡುತ್ತದೆ.
ಕಣ್ಣಿನ ದೃಷ್ಟಿ
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ‘ ಎ ಅಂಶ ಉತ್ತಮವಾಗಿದ್ದು ಇದರ ಸೇವನೆ ಕಣ್ಣಿಗೆ ಬಹಳಷ್ಟು ಉತ್ತಮ. ಇದು ದೃಷ್ಟಿಯನ್ನು ಕಾಪಾಡಿಕೊಳ್ಳಲು ಬಹಳ ಸಹಕಾರಿ ಯಾಗುತ್ತದೆ. ಇನ್ನು ಅಧಿಕ ರಕ್ತದ ಒತ್ತಡ ಇದ್ದವರಿಗೆ ಈ ನುಗ್ಗೆ ಸೊಪ್ಪು ಅನ್ನೋದು ಬಹಳಷ್ಟು ಸಹಕಾರಿಯಾಗುತ್ತದೆ. ಇದರಲ್ಲಿ ಉತ್ತಮ ಪೊಟ್ಯಾಶಿಯಂ ಅಂಶ ಇದ್ದು ದೇಹವು ಸದೃಡ ವಾಗಿ ಬೆಳೆಯಲು ಸಹಕಾರಿಯಾಗುತ್ತದೆ.
ಒಟ್ಟಿನಲ್ಲಿ ನುಗ್ಗೆ ಸೊಪ್ಪು ತಿನ್ನುವುದರಿಂದ ಬಹಳಷ್ಟು ಪ್ರಯೋಜನ ಇದ್ದು, ದೇಹಕ್ಕೆ ಬಹಳ ಉತ್ತಮ. ಆರೋಗ್ಯಕ್ಕೆ ಸಹಕಾರಿಯಾಗಿರುವ ನಿಟ್ಟಿನಲ್ಲಿ ಈ ನುಗ್ಗೆ ಸೊಪ್ಪು ಮುಖ್ಯ ಪಾತ್ರ ವನ್ನು ವಹಿಸುತ್ತದೆ.
