Home ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲ್ಲ, ವಿವಾದಿತ ಪಠ್ಯ ವಿಷಯಗಳನ್ನು ಭೋದಿಸದಂತೆ ಸೂಚನೆ

ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲ್ಲ, ವಿವಾದಿತ ಪಠ್ಯ ವಿಷಯಗಳನ್ನು ಭೋದಿಸದಂತೆ ಸೂಚನೆ

ಬೆಂಗಳೂರು: ಈ ವರ್ಷ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಿಲ್ಲ, ಬದಲಾಗಿ ಕೆಲ ವಿವಾದಿತ ಪಠ್ಯ ವಿಷಯಗಳನ್ನ ಬೋಧನೆ ಮಾಡದಂತೆ ಶಿಕ್ಷಕರಿಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಸಾಹಿತಿ ಡಾ.ಚಂದ್ರಶೇಖರ್‌ ಈ ಬಗ್ಗೆ ಚರ್ಚಿಸಿಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಹೌದು, ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದ್ದವು, ಈ ಬಾರಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗುವುದು ಎಂದು ಕೂಡ ಹೇಳಲಾಗಿತ್ತು. ಆದರೆ, ಈ ಬಾರಿ ಈಗಾಗಲೇ ಶಾಲೆ ಆರಂಭವಾಗಿರುವುದರಿಂದ ಪಠ್ಯ ಪುಸ್ತಕಗಳನ್ನೂ ಕೂಡ ಪೂರೈಕೆ ಮಾಡಲಾಗಿದೆ. ಹೀಗಾಗಿ ಮತ್ತೆ ಪಠ್ಯ ಪುಸ್ತಕ ವಾಪಸ್‌ ಪಡೆದು ಪರಿಷ್ಕರಣೆ ಮಾಡಲು ಸಮಯಾವಕಾಶ ಹೆಚ್ಚು ಬೇಕಗಿರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

 
Previous articleಪ್ರತಿಭಟನೆ ವೇಳೆ ನಿಯಮ ಉಲ್ಲಂಘನೆ ಪ್ರಕರಣ:36 ಕೈ ಮುಖಂಡರ ವಿರುದ್ಧ ಸಮನ್ಸ್‌ ಜಾರಿ
Next articleಈ ಬಾರಿಯೂ ರೈತರಿಗೆ ತೊಂದರೆಯಾಗದಂತೆ ಸಾಲ ನೀಡುತ್ತೇವೆ: ಸಚಿವ ಕೆ.ಎನ್‌.ರಾಜಣ್ಣ