
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಈ ತಿಂಗಳಿನಿಂದ ಜಾರಿಗೆ ಬಂದಿದೆ. ಅಗತ್ಯ ಇರುವಷ್ಟು ಅಕ್ಕಿ ಪೂರೈಕೆ ಇಲ್ಲದ ಕಾರಣ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ನೀಡಿ ಉಳಿದ 5 ಕೆಜಿ ಬದಲಿಗೆ ಹಣವನ್ನು ನೀಡುವುದಾಗಿ ಸರ್ಕಾರ ತೀಮಾನಿಸಿದೆ. ಈ ಬಗ್ಗೆ ಮತ್ತೊಂದು ಹೊಸ ಅಲಿಖಿತ ಆದೇಶ ಹೊರಡಿಸಿರುವ ಸರ್ಕಾರ ಪಡಿತರ ಪಡೆಯಲು ಬರುವವರಿಗೆ ಮಾತ್ರ ಹಣ ಜಮಾ ಮಾಡಲಗುವುದು ಎಂದು ಹೇಳಿದೆ.
ಹೌದು, ಕೆಲವು ಪಡಿತರ ಚೀಟಿದಾರರು ಪಡಿತರ ತೆಗೆದುಕೊಂಡು ಹೋಗಲು ಬರುವುದೇ ಇಲ್ಲ. ಅಂತಹವರಿಗೆ ಹಣವನ್ನೂ ಸಹ ವರ್ಗಾವಣೆ ಮಾಡಬಾರದು ಎಂದು ಸರ್ಕಾರ ಸಂಬಂಧ ಪಟ್ಟ ಇಲಾಖೆಗೆ ಅಲಿಖಿತ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ಇನ್ನು, ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾಡುದಾರರಿಗೆ ಮಾಸಿಕ ತಲಾ 170ರೂ ನೀಡುತ್ತೇವೆ ಎಂದು ಸಕಾರ ಹೇಳಿದೆ. ಜುಲೈ ತಿಂಗಳಿನಿಂದಲೇ ಪಡಿತರ ಚೀಟಿದಾರರ ಖಾತೆಗೆ ಹಣ ವಗಾವಣೆ ಮಾಡಲಾಗುವುದು ಎಂದು ಹೇಳಿದ್ದು, ಹೆಚ್ಚುವರಿ ಅಕ್ಕಿ ಸಿಗುವವರೆಗೆ ಮಾತ್ರ ಹಣ ನೀಡುತ್ತೇವೆ. ಅಕ್ಕಿ ಸಿಕ್ಕ ನಂತರ ಸಂಪೂರ್ಣ ಅಕ್ಕಿಯನ್ನೇ ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
