Home ಸುದ್ದಿಗಳು ರಾಷ್ಟ್ರೀಯ ಪ್ರಧಾನಿ ನರೇಂದ್ರ ಮೋದಿ ನಿವಾಸದ ಮೇಲೆ ಡ್ರೋನ್‌ ಹಾರಾಟ: ತನಿಖೆಗೆ ಆದೇಶ

ಪ್ರಧಾನಿ ನರೇಂದ್ರ ಮೋದಿ ನಿವಾಸದ ಮೇಲೆ ಡ್ರೋನ್‌ ಹಾರಾಟ: ತನಿಖೆಗೆ ಆದೇಶ

0
ಪ್ರಧಾನಿ ನರೇಂದ್ರ ಮೋದಿ ನಿವಾಸದ ಮೇಲೆ ಡ್ರೋನ್‌ ಹಾರಾಟ: ತನಿಖೆಗೆ ಆದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿವಾಸದ ಮೇಲೆ ಡ್ರೋನ್‌ ಹಾರುತ್ತಿರುವುದು ಕಂಡುಬಂದಿದ್ದು, ತಕ್ಷಣವೇ ಎಸ್‌ಪಿಜಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಇದೀಗ ಡ್ರೋನ್‌ ನ ಪತ್ತೆಗೆ ಶೋಧ ಕಾರ್ಯ ಮುಂದುವರಿಸಲಾಗಿದೆ.


ಮುಂಜಾನೆ 5 ಗಂಟೆ ಸುಮಾರಿಗೆ ವಿಶೇಷ ಸಂರಕ್ಷಣಾ ಗುಂಪಿನ ಅಧಿಕಾರಿಗಳು ಮೋದಿ ಅವರ ನಿವಾಸದ ಮೇಲೆ ಡ್ರೋನ್‌ ಹಾರುತ್ತಿರುವುದನ್ನು ಗಮನಿಸಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಿರುವ ದೆಹಲಿ ಪೊಲೀಸರು ಡ್ರೋನ್‌ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈವರೆಗೆ ಯಾವುದೇ ಡ್ರೋನ್‌ ಪತ್ತೆಯಾಗಿಲ್ಲ ಎನ್ನಲಾಗಿದೆ.

 

LEAVE A REPLY

Please enter your comment!
Please enter your name here