
ನವದೆಹಲಿ: ದೇಶದಾದ್ಯಂತ ಇರುವ ಐಐಟಿಗಳಿಗೆ ಪ್ರವೇಶಾರ್ಹತೆ ಪಡೆಯಲು ನಡೆಸುವ ಜೆಇಇ ಅಡ್ವಾನ್ಸ್ಡ್ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದೆ.
ಪ್ರಸಕ್ತ ಸಾಲಿನ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ,180,372 ವಿದ್ಯಾಥಿಗಳು ಬರೆದಿದ್ದು, ಆ ಪೈಕಿ 26,204 ವಿದ್ಯಾಥಿಗಳು ಮತ್ತು 7,509 ವಿದ್ಯಾಥಿನಿಯರು ತೇಗಡೆಯಾಗಿದ್ದಾರೆ. ಈ ಬಾರಿ ಹೈದರಾಬಾದ್ ನ ವಾವಿಲಾಲ ಚಿದ್ವಿಲಾ ರೆಡ್ಡಿ ಮೊದಲ ರ್ಯಾಂಕ್ ಗಳಿಸಿದ್ದಾರೆ.
