
ನವದೆಹಲಿ: ಈ ಬಾರಿ ಬಿಸಿಲಿನ ಬೇಗೆ ಎಲ್ಲೆಡೆ ಜೋರಾಗಿದೆ. ಮಳೆಯನ್ನ ಕಾಣದೇ ಭೂಮಿ ಬರಡಾಗಿದೆ. ಹಲವೆಡೆ ಮಳೆಯಿಲ್ಲದೇ ಬಿಸಿಲಿನ ಬೇಗೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ತಾಪಮಾನ ಹೆಚ್ಚಿದ್ದು, ಜನರು ಕಂಗಾಲಾಗಿದ್ದಾರೆ.
ಹೌದು, ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ 40ಡಿಗ್ರಿಗಿಂತ ಹೆಚ್ಚಿನ ತಾಪಮಾನವಿದ್ದು, ಬಿಸಿಗಾಳಿಯಿಂದಾಗಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ 54 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಮೂರು ದಿನಗಳಲ್ಲಿ ಬಿಹಾರದಲ್ಲಿ 44ಮಂದಿ ಸಾವನ್ನಪ್ಪಿದ್ದು, ಎರಡೂ ಜಿಲ್ಲೆಗಳಲ್ಲಿ ಈವರೆಗೆ ಒಟ್ಟು 98 ಮಂದಿ ಅಸುನೀಗಿದ್ದಾರೆ.
