ಬೆಂಗಳೂರು: ಕಾಂಗ್ರೆಸ್ ಸರ್ಕಾರ ನೀಡಿರುವ 5ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದೂಡಲಾಗಿದೆ. ಇದೇ ತಿಂಗಳು 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದರು. ಆದರೆ ಇದೀಗ ತಾಂತ್ರಿಕ ದೋಷ ಹಿನ್ನೆಲೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದೂಡಲಾಗಿದೆ.
ಹೌದು, ತಾಂತ್ರಿಕ ದೋಷದಿಂದಾಗಿ ಸೇವಾಸಿಂದು ಆಪ್ ಮೂಲಕ ಅಜಿ ಸಲ್ಲಿಸಲು ವಿಳಂಬವಾಗುವ ಹಿನ್ನೆಲೆ ಜೂನ್ 15ರ ಬದಲಾಗಿ ಜೂನ್ 18ರಿಂದ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆ ಮೂಲಕ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಅನ್ನು ಪಡೆಯಬಹುದಾಗಿದೆ.
