Home ಕರಾವಳಿ ಬೈಕ್‌ ಮತ್ತು ಖಾಸಗಿ ಬಸ್‌ ನಡುವೆ ಅಪಘಾತ: ಸವಾರ ಸ್ಪಾಟ್‌ ಡೆತ್‌

ಬೈಕ್‌ ಮತ್ತು ಖಾಸಗಿ ಬಸ್‌ ನಡುವೆ ಅಪಘಾತ: ಸವಾರ ಸ್ಪಾಟ್‌ ಡೆತ್‌

ಕಾರ್ಕಳ: ಖಾಸಗಿ ಬಸ್ಸಿಗೆ ಬೈಕ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ಮುಖ್ಯರಸ್ತೆಯ ಬೈಲೂರು ಪರಶುರಾಮ ಥೀಮ್‌ ಪಾರ್ಕ್ ಬಳಿ ನಡೆದಿದೆ.
ಮೃತರನ್ನು ಜಾರ್ಕಳ ನೆಲ್ಲಿಗುಡ್ಡೆಯ ನಿವಾಸಿ ಕಾರ್ತಿಕ್(23) ಎಂದು ಗುರುತಿಸಲಾಗಿದೆ. ಬೈಲೂರಿನಿಂದ ಜಾರ್ಕಳದ ಕಡೆಗೆ ಹೋಗುತ್ತಿದ್ದ ಬೈಕ್‌ ಕಾರ್ಕಳದಿಂದ ಉಡುಪಿಗೆ ಹೋಗುತ್ತಿದ್ದ ಬೈಕ್‌ ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್‌ ನುಜ್ಜುಗುಜ್ಜಾಗಿದ್ದು, ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ 10ತಿಂಗಳ ಮಗುವನ್ನು ಅಗಲಿದ್ದು, ಈ ಸಂಬಂಧ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
Previous articleಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್‌: ನಟಿ ಶ್ರುತಿ ಹರಿಹರನ್‌ ಗೆ ಕೋರ್ಟ್ ನೋಟೀಸ್‌
Next articleಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಕೊನೆಗೂ ರಿಲೀಸ್