Home ಕ್ರೀಡೆ ಭಾರತ-ಪಾಕ್‌ ನಡುವೆ ಹೈವೋಲ್ಟೇಜ್‌ ಕದನ: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಇಂಡಿಯಾ

ಭಾರತ-ಪಾಕ್‌ ನಡುವೆ ಹೈವೋಲ್ಟೇಜ್‌ ಕದನ: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಇಂಡಿಯಾ

ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯಲಿದ್ದು, ಕ್ರಿಕೆಟ್‌ ಪ್ರಿಯರು ಕಾತರದಿಂದ ಕಾಯುತ್ತಿದ್ದ ಕ್ಷಣ ಇಂದು ಬಂದೇ ಬಿಟ್ಟಿದೆ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕ್  ಮತ್ತು ಇಂಡಿಯಾ ಸೆಣಸಾಡಲಿದ್ದು, ಭಾರತದ ವಿರುದ್ಧ ಟಾಸ್‌ ಗೆದ್ದಿರುವ ಭಾರತ ಬೌಲಿಂಗ್‌ ಆಯ್ಕೆ ಮಾಡಿದೆ.

ಏಕದಿನ ವಿಶ್ವಕಪ್ ಪಂದ್ಯದಲ್ಲಿ ಈವರೆಗೆ ಪಾಕಿಸ್ತಾನ ವಿರುದ್ಧ ಗೆಲುವನ್ನೇ ಸಾಧಿಸುತ್ತಾ ಬಂದಿರುವ ಭಾರತ ಸತತ ಏಳು ಬಾರಿ ಪಾಕಿಸ್ತಾನವನ್ನು ಸೋಲಿಸಿತ್ತು. ಎಂಟನೇ ಸಲವೂ ಕೂಡ ತಾವೇ ಗೆಲ್ಲಬೇಕು ಎನ್ನುವ ಹುರುಪಿನಲ್ಲಿ ಭಾರತ ಆಟವನ್ನು ಪ್ರಾರಂಭಿಸುತ್ತಿದ್ದು, ಈ ಬಾರಿಯಾದರೂ ನಾವು ಗೆಲುವನ್ನು ಸಾಧಿಸಬೇಕು ಎನ್ನುವ ನಿರೀಕ್ಷೆಯಲ್ಲಿ ಪಾಕಿಸ್ತಾನ ಕಣಕ್ಕಿಳಿದಿದೆ.‌

ಈಗಾಗಲೇ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಗೆಲುವನ್ನು ಸಾಧಿಸಿರುವ ಭಾರತ ಇದೀಗ ಪಾಕಿಸ್ತಾನವನ್ನು ಎದುರಿಸುತ್ತಿದೆ. ಶತ್ರು ರಾಷ್ಟ್ರಗಳೊಂದಿಗೆ ಭಾರತದ ಸೆಣಸಾಟವನ್ನು ಕ್ರಿಕೆಟಿಗರು ಬಹಳ ಕುತೂಹಲದಿಂದ ವೀಕ್ಷಿಸಲು ಸಜ್ಜಾಗಿದ್ದಾರೆ. ಎಂಟನೇ ಭಾರಿಯೂ ಕೂಡ ಭಾರತ ಗೆದ್ದು ಬರಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್‌ ಮಾಡುತ್ತಿದ್ದಾರೆ.

ಇನ್ನು, 2023ರ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ನ ಹಗಲು ಪಂದ್ಯಗಳು ಬೆಳಿಗ್ಗೆ 10:30ಕ್ಕೆ ಆರಂಭವಾಗಲಿದ್ದು, ಹಗಲು-ರಾತ್ರಿ ಪಂದ್ಯಗಳು ಮಧ್ಯಾಹ್ನ 2ಗಂಟೆಗೆ ಆರಂಭವಾಗಲಿದೆ. ಪಂದ್ಯವನ್ನು ಭಾರತದಲ್ಲಿ ಸ್ಟಾರ್‌ ಸ್ಪೋಟ್ಸ್‌ ನೆಟ್‌ವಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಎಲ್ಲಾ 48ಪಂದ್ಯಗಳನ್ನು ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ ನಲ್ಲಿ ಲೈವ್‌ ಸ್ಟ್ರೀಮ್‌ ಮಾಡಲಾಗತ್ತದೆ.

 
Previous articleಉಡುಪಿ: ವಿಶ್ವ ಬಂಟರ ಸಮ್ಮೇಳನ – 2023ರ ಆಮಂತ್ರಣ ಪತ್ರಿಕೆ ಬಿಡುಗಡೆ
Next articleಅನುದಾನಕ್ಕೆ ತಡೆಯೊಡ್ಡುತ್ತಿರುವವರು ವಿಘ್ನ ಸಂತೋಷಿಗಳು: ಸುಮಿತ್ ಕೌಡೂರು