Home ಕರಾವಳಿ ಮಂಗಳೂರಿನಲ್ಲಿ ಸ್ಥಾಪನೆಯಾಯ್ತು ಆಯಂಟಿ ಕಮ್ಯುನಲ್‌ ವಿಂಗ್:‌ ಎಲ್ಲಾ ಕೋಮು ಪ್ರಕರಣಕ್ಕೂ ಬ್ರೇಕ್

ಮಂಗಳೂರಿನಲ್ಲಿ ಸ್ಥಾಪನೆಯಾಯ್ತು ಆಯಂಟಿ ಕಮ್ಯುನಲ್‌ ವಿಂಗ್:‌ ಎಲ್ಲಾ ಕೋಮು ಪ್ರಕರಣಕ್ಕೂ ಬ್ರೇಕ್

ಮಂಗಳೂರು: ಗೃಹ ಸಚಿವರ ಸೂಚನೆಯಂತೆ ಮಂಗಳೂರಿನಲ್ಲಿ ಸಿಎಸ್‌ಬಿ ಇನ್ಸ್‌ಪೆಕ್ಟರ್‌ ಶರೀಫ್‌ ಅವರ ನೇತೃತ್ವದಲ್ಲಿ ಆಯಂಟಿ ಕಮ್ಯೂನಲ್‌ ವಿಂಗ್‌ ಅನ್ನು ಸ್ಥಾಪಿಸಲಾಗಿದೆ. ಇದು ಎಲ್ಲಾ ರೀತಿಯ ಕೋಮು ಪ್ರಕರಣಳ ಬಗ್ಗೆ ನಿಗಾ ವಹಿಸಲಿದೆ ಎಂದು ಹೇಳಲಾಗಿದೆ.
ಆಯಂಟಿ ಕಮ್ಯುನಲ್‌ ವಿಂಗ್‌ ಅನ್ನು ರಚಿಸಿರುವ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್‌.ಜೈನ್‌, ಇದರ ಮೇಲುಸ್ತುವಾರಿಯನ್ನು ಸಿಎಸ್‌ಬಿ ಇನ್ಸ್‌ಪೆಕ್ಟರ್‌ ಹಾಗೂ ಸಿಸಿಬಿ ಎಸಿಪಿ ಪಿ.ಎ.ಹೆಗ್ಡೆ ವಹಿಸಿದ್ದಾರೆ. ಇದು ಸುಮಾರು ಕಳೆದ 10 ವಷಗಳಿಂದ ನಡೆದ ಪ್ರಕರಣಗಳ ಬಗ್ಗೆ ಈ ತಂಡ ನಿಗಾವಹಿಸಲಿದ್ದು, ನಗರದ ವಿಶೇಷ ಘಟಕದ ಪೊಲೀಸ್‌ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಇದರ ಸದಸ್ಯರಾಗಿರುತ್ತಾರೆ. ಅಲ್ಲದೇ ನಗರದಲ್ಲಿ ಯಾವುದೇ ರೀತಿಯ ಕೋಮು ಗಲಭೆ ನಡೆಯದಂತೆ ಹಾಗೂ ಕೋಮು ಸೌಹಾದಕ್ಕೆ ದಕ್ಕೆಯಾಗದಂತೆ ಈ ತಂಡ ಕ್ರಮಕೈಗೊಳ್ಳತ್ತದೆ.‌

 
Previous articleಗೃಹಲಕ್ಷ್ಮೀ ಯೋಜನೆ ಅರ್ಜಿ- ಸಲ್ಲಿಕೆಗೆ ಮತ್ತೆ ವಿಘ್ನ: 4-5 ದಿನ ಮುಂದೂಡಿದ ಸರ್ಕಾರ
Next articleಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ