ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿದೆ. ಆದರೆ ಇದರಿಂದ ಆರ್ಥಿಕ ಸಂಕಷ್ಟ ಎದುರಾಗಬಹುದು ಎನ್ನುವ ಸಂಕಷ್ಟ ಸರ್ಕಾರಕ್ಕೆ ಎದುರಾಗಿದೆ. ಈ ಹಿನ್ನೆಲೆ ಭರವಸೆ ಈಡೇರಿಕೆಗಳ ಮೂಲಕ ಎದುರಾಗಬಹುದಾದ ಆರ್ಥಿಕ ಸಂಕಷ್ಟವನ್ನು ಸರಿದೂಗಿಸುವ ಸಲುವಾಗಿ ದರ ಏರಿಕೆಯ ನಿರ್ಧಾರವನ್ನು ಮಾಡಿದೆ. ಆ ಮೂಲಕ ಸರ್ಕಾರ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ.
ಹೌದು, ಪ್ರತಿ ಬಾಟೆಲ್ ಮದ್ಯದ ದರ 10ರೂ ರಿಂದ 20ರವರೆಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಡ್ ವೈಸರ್ ಬಿಯರ್ ದರ 198 ರೂ. ರಿಂದ 220ಕ್ಕೆ ಹೆಚ್ಚಳವಾಗಲಿದೆ. ಕಿಂಗ್ ಫಿಷರ್ ಬಿಯರ್ ದರವನ್ನ ರೂ.160ರಿಂದ 170ಕ್ಕೆ ಏರಿಕೆ ಮಾಡಲಾಗಿದೆ. ಯುಬಿ ಪ್ರೀಮಿಯಂ ದರ ರೂ.125ರಿಂದ 135, ಸ್ಟ್ರಾಂಗ್ ದರ ರೂ.130ರಿಂದ 135ಗೆ ಹೆಚ್ಚಳ ಮಾಡುವಂತೆ ಸಕಾರ ತೀಮಾನಿಸಿದೆ.
