ಉಡುಪಿ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತು ಇತ್ತೀಚೆಗೆ ಮತ್ತೆ ಮುನ್ನಲೆಗೆ ಬರುತ್ತಿದೆ. ಸೈಬರ್ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ಕೊಟ್ಟರೂ ಕೂಡ ಜನರು ಮೋಸ ಹೋಗುತ್ತಲೇ ಇದ್ದಾರೆ. ಇದೀಗ ಮೆಸ್ಕಾಂ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೋರ್ವರಿಂದ ಲಕ್ಷ ಸುಲಿಗೆ ಮಾಡಿರುವ ಘಟನೆ ಉಡುಪಿಯ ಅಂಬಲಪಾಡಿಯಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಯೋರ್ವ ಬಾಕಿ ಇರುವ ಕರೆಂಟ್ ಬಿಲ್ ಕಟ್ಟುವಂತೆ ಹೇಳಿ ಓಟಿಪಿ ಪಡೆದು ಅಂಬಲಪಾಡಿಯ ನಿವಾಸಿ ಎಂ.ಗುರುರಾಜ್ ಭಟ್ ಅವರಿಗೆ 1.79 ಲಕ್ಷ ರೂ ವಂಚಿಸಿದ್ದಾರೆ. ಈ ಬಗ್ಗೆ ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
