
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ರಾಜ್ಯದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಒಂದೇ ದಿನ 6 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ಜುಲೈ ತಿಂಗಳಲ್ಲಿ ಈವೆರೆಗೆ 15 ಮಂದಿ ಸಾವನ್ನಪ್ಪಿದ್ದಾರೆ.
ಕುಮಟಾ ತಾಲೂಕಿನ ಬೆಟ್ಟುಳ್ಳಿಯ ಪಾಂಡುರಂಗ ನಾಯ್ಕ್(38), ಉಲ್ಲಾಸ ಗಾವಡಿ(50), ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗಂಗಮ್ಮ(67), ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದ ಝರೀನಾ(47), ಉಡುಪಿ ಜಿಲ್ಲೆಯ ಶೆಟ್ಟಬೆಟ್ಟು ನಿವಾಸಿ ರಾಜು ಪಾಣಾರ(47) ಮೃತ ದುರ್ದೈವಿಗಳು.
